ಕೆಲಸದ ಜಂಜಾಟದಿಂದ ಬ್ರೇಕ್ ಕೊಟ್ಟು ಟ್ರಿಪ್ ಹೋಗೋಣ ಅಂದರೆ ಥಟ್ ಅಂತ ನೆನಪಾಗೋದು ಗೋವಾ. ಗೋವಾ ಒಂದು ರೀತಿ ಡೆಸ್ಟಿನೇಶನ್ ಪ್ಲೇಸ್ ಇದ್ದ ಹಾಗೆ.ದೇಶೀಯ ಪ್ರವಾಸೋದ್ಯಮದಲ್ಲಿ ರಾಜ್ಯವು ಚೇತರಿಕೆ ಕಂಡಿದ್ದರೂ ವಿದೇಶಿಯರಿಲ್ಲದೇ ಗೋವಾ ಸೊರಗುತ್ತಿದೆ.ಕೊರೋನಾ ಸಾಂಕ್ರಮಿಕ ಖಾಯಿಲೆ ನಂತರ ಗೋವಾಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಗೋವಾದ ಆರ್ಥಿಕತೆಯೂ ಅಂತರರಾಷ್ಟ್ರೀಯ ಪ್ರವಾಸಿಗರ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿ ಪರಿಣಮಿಸುತ್ತಿದೆ. 2019 ರಲ್ಲಿ, ಗೋವಾ ಸುಮಾರು 9.4 ಲಕ್ಷ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿತು, ಆದರೆ 2023 ರ ವೇಳೆಗೆ, ಓಹೆರಾಲ್ಡೊ ಪ್ರಕಾರ, ನವೆಂಬರ್ ವೇಳೆಗೆ ಈ ಸಂಖ್ಯೆ ಕೇವಲ 4.03 ಲಕ್ಷಕ್ಕೆ ಇಳಿದಿದೆ.60% ದಷ್ಟು ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಗೋವಾದಲ್ಲಿ ʼಟ್ಯಾಕ್ಸಿ ಮಾಫಿಯಾ' ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ.ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ಬಾಯಿಗೆ ಬಂದ ಹಾಗೆ ದರ ಹೇಳುವುದು,ಸರ್ಕಾರದ ನಿಯಮಗಳನ್ನು ಪಾಲಿಸದೇ ಇರುವುದು,ವಿದೇಶಿಯರು ಅತಿಯಾದ ಶುಲ್ಕಕ್ಕೆ ಒಪ್ಪದೇ ಹೋದಲ್ಲಿ ಬೆದರಿಕೆ ಹಾಕುವುದು ಇದರಿಂದ ಬೆದರಿದ ವಿದೇಶಿಯರು ಗೋವಾ ಸಹವಾಸವೇ ಬೇಡ ಎಂದು ಇತ್ತ ಕಡೆ ಬರುತ್ತಿಲ್ಲ ಎನ್ನುವ ವರದಿಯಾಗಿದೆ.ಆನ್ ಲೈನ್ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್‌ನಂತಹ ಸೌಲಭ್ಯ ಇಲ್ಲದೇ ಇರುವುದರಿಂದ ಸ್ಥಳೀಯ ಟ್ಯಾಕ್ಸಿಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ರೀತಿ ದೌರ್ಜನ್ಯ ನಡೆಯುತ್ತಿದೆ.
PublicNext
08/11/2024 06:42 pm