ಧಾರವಾಡ: ಧಾರವಾಡ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಅವರ ಧಾರವಾಡ ನಿವಾಸ ಸೇರಿದಂತೆ ಅವರಿಗೆ ಸೇರಿದ ಒಟ್ಟು ಏಳು ಮನೆ ಹಾಗೂ ಫಾರ್ಮ್ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು.
ದಾಳಿ ವೇಳೆ ಸುಮಾರು 1 ಕೋಟಿ 85 ಲಕ್ಷ ಮೌಲ್ಯದ 3 ಸೈಟ್ಗಳು, 1 ಮನೆ, 7 ಎಕರೆ 26 ಗುಂಟೆ ಕೃಷಿ ಜಮೀನು, 41.11 ಲಕ್ಷ ನಗದು ಸಹಿತ 94,22,300 ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 2 ಕೋಟಿ 79 ಲಕ್ಷ, 22,300 ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಗೋವಿಂದಪ್ಪ ಅವರಿಗೆ ಸೇರಿದ ಧಾರವಾಡದ ಮನೆ, ನರಗುಂದದ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/11/2024 10:48 pm