ಧಾರವಾಡ: ರಾಜ್ಯದಲ್ಲಿರುವ ಗುಡಿ ಗುಂಡಾರಗಳು ವಕ್ಫ್ ಆಸ್ತಿ ಎಂದು ಹೇಳುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ಒಬ್ಬ ರಾಕ್ಷಸ. ಆತ ಹುಳು ಬಿದ್ದು ಸಾಯುತ್ತಾನೆ. ಅವನು ಇಸ್ಲಾಂ ಧರ್ಮವನ್ನು ಕೆಡಿಸುತ್ತಿದ್ದಾನೆ. ಸ್ವತಃ ಅಲ್ಲಾಹುನೇ ಹರಾಮಿ ಆಸ್ತಿ ತೆಗೆದುಕೊಳ್ಳಬಾರದು, ನಿಯತ್ತಾಗಿ ದುಡಿದು ನಿಯತ್ತಾಗಿ ಆಸ್ತಿ ತೆಗೆದುಕೊಳ್ಳಿ ಎಂದಿದ್ದಾನೆ ಎಂದು ಮುಸ್ಲಿಂ ಮುಖಂಡ ಅಯೂಫ್ ಅವರು, ಸಚಿವ ಜಮೀರ ಅಹ್ಮದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ನಡೆದ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳ ಪ್ರತಿಭಟನಾ ಸಭೆಯಲ್ಲಿ ಸ್ವತಃ ಮುಸ್ಲಿಂ ಮುಖಂಡ ಅಯೂಫ್ ಪಾಲ್ಗೊಂಡು ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೆಜೆಟ್ ತೆಗೆದಾಗ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಂದಾಗಿಂದ ಎಲ್ಲ ಆಸ್ತಿ ನಮ್ಮದೇ ಎಂದು ಹೇಳುತ್ತಾರೆ. ಎಲ್ಲವೂ ವಕ್ಪ್ ಆಸ್ತಿ ನಮ್ಮದೇ ಎಂದು ಹೇಳುತ್ತಾರೆ. 1937 ರಿಂದ ನಮ್ಮ ಆಸ್ತಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಡೀಡ್ ಆಗಿದೆ. 1975 ರಲ್ಲಿ ವಕ್ಪ್ ಎಂದು ನಮ್ಮ ಆಸ್ತಿಗೆ ಬರುತ್ತಾರೆ. ನಾವು ಯಾವ ಹರಾಮಿ ಆಸ್ತಿಯನ್ನು ತೆಗೆದುಕೊಂಡಿಲ್ಲ. ಅದೇನು ವಕ್ಪ್ ಆಸ್ತಿಯಲ್ಲ. ಜಮೀರ್ ಅಹ್ಮದ್ ಹೇಳ್ತಾನೆ, ದೊಡ್ಡ ದೊಡ್ಡ ಗುಡಿ ಗುಂಡಾರಗಳು ವಕ್ಪ್ ಆಸ್ತಿ ಎಂದು ಹೇಳುತ್ತಾನೆ. ಜಮೀರ್ ಅಹ್ಮದ್ ರಾಕ್ಷಸ, ಆತ ಹಳು ಬಿದ್ದು ಸಾಯ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/11/2024 03:06 pm