ಹುಬ್ಬಳ್ಳಿ: ಅಲ್ಪಸಂಖ್ಯಾತ ಗುತ್ತಿದಾರರಿಗೆ ಮೀಸಲಾತಿ ಕೊಡಬೇಕು ಎಂಬ ವಿಚಾರ, ಮುಸ್ಲಿಂನವರಿಗೆ ಮೀಸಲಾತಿ ಕೊಟ್ಟ್ರೆ ತಪ್ಪೇನು..? ಮೀಸಲಾತಿ ಕೇಳೋದು ಎಲ್ಲರ ಹಕ್ಕು ಆಗಿದ್ದು, ಎಲ್ಲಾ ಸಮುದಾಯಕ್ಕೂ ಮೀಸಲಾತಿ ಕೇಳುವ ಹಕ್ಕು ಇದೆ. ಆರ್ಥಿಕವಾಗಿ ಹಿಂದುಳಿರುವ ಸಮುದಾಯಕ್ಕೆ ಮೀಸಲಾತಿ ನೀಡಿದ್ರೆ ತಪ್ಪೇನಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೂಗಳಲ್ಲಿ ಸಹ ಬಡವರ ಇದ್ದು ಲಿಂಗಾಯತರು ಸಹ ಮೀಸಲಾತಿ ಕೇಳುತ್ತಿದ್ದಾರೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಒಟ್ಟಾರೆ ದೇಶದಲ್ಲಿ ಬಡವರ ಸಂಖ್ಯೆ ಜಾಸ್ತಿಯಿದೆ. ಗೊಲ್ಲ ಸಮುದಾಯ ಎಸ್ ಸಿ ನೂ ಅಲ್ಲಾ ಎಸ್ಟಿ ಅಲ್ಲಾ ಅಂತಹ ಸಮುದಾಯವನ್ನು ನೋಡಬೇಕು. ರಾಜಕೀಯವಾಗಿ ಹಿಂದೂ- ಮುಸ್ಲಿಂ ಅಂತ ಮಾತನಾಡುತ್ತಾ ನಾವು ಅವರು ವೈರಿಗಳು ಎನ್ನುವ ಮನಸ್ಥಿತಿಗೆ ಬಂದಿದ್ದೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಮೀಸಲಾತಿ ಕೇಳಬಹುದು ಎಂದ ಅವರು ಆದರೆ ಅದನ್ನು ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/11/2024 07:35 pm