ಕುಂದಗೋಳ : ಬೆಳೆ ಹಾನಿ ವರದಿ ಲೋಪದೋಷದಿಂದ ಕೂಡಿದೆ ಮತ್ತು ಬೆಳೆ ಸಮೀಕ್ಷೆ ಸರಿಯಾಗಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಶಾಸಕ ಎಂ.ಆರ್.ಪಾಟೀಲ್ ಮುಂದೆ ಸಹಾಯಕ ಕೃಷಿ ನಿರ್ದೇಶಕರ ಜೊತೆ ತೀವ್ರ ಚರ್ಚೆ ನಡೆಸಿದ ಪ್ರಸಂಗಕ್ಕೆ ತ್ರೈಮಾಸಿಕ ಸಭೆ ಸಾಕ್ಷಿಯಾಯಿತು.
ಹೌದು ! ಕುಂದಗೋಳ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶಾಸಕ ಎಂ.ಆರ್.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಕೃಷಿ ಇಲಾಖೆ ಕೈಗೊಂಡಿರುವ ಬೆಳೆ ಹಾನಿ ವರದಿಯಲ್ಲಿ ವ್ಯತ್ಯಾಸವಿದೆ ಮತ್ತು ಬೆಳೆ ಸಮೀಕ್ಷೆ ಲೋಪದೋಷದಿಂದ ಕೂಡಿದೆ ಇನ್ಸೂರೆನ್ಸ್ ಕಂಪನಿ ರೈತರಿಗೆ ದಾರಿ ತಪ್ಪಿಸುತ್ತಿವೆ ಎಂದರು.
ಈ ವೇಳೆ ಸಭೆಗೆ ಬಂದ ರೈತರು ಜಿಎಪಿಎಸ್ ಪೋಟೋ ತಂದು ಶಾಸಕರ ಕೈಯಲ್ಲಿ ಕೊಟ್ಟು ನಮ್ಮ ಬೆಳೆ ಹೊಲದಲ್ಲಿ ಇರುವುದು ಬೇರೇ ಇಲ್ಲಿ ಸಮೀಕ್ಷೆ ಆಗಿರುವುದೇ ಬೇರೆ ಎಂದರು.
ಬಳಿಕ ಸಹಾಯಕ ಕೃಷಿ ನಿರ್ದೇಶಕರು ವೇದಿಕೆ ಮೇಲೆ ಏರಿ ರೈತರ ಅರ್ಜಿ ಸರಿಪಡಿಸುವ ವಿಶ್ವಾಸ ನೀಡಿದರು, ಬಳಿಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಕರೋಶಿ ಮೆಣಸಿನಕಾಯಿ ಹಾನಿ ವಿವರಿಸಿದಾಗ ಹಾನಿ ಕ್ಷೇತ್ರ ಕಡಿಮೆ ಎಂದು ಸಮಸ್ಯೆ ಏರ್ಪಟ್ಟಿತು.
ಇನ್ನೂ ಹೆಸ್ಕಾಂ ಇಲಾಖೆ ಎಇಇ ವಿ.ಎಚ್.ಮಠದ ವರದಿ ಮಂಡಿಸುವಾಗ ಗಂಗಾ ಕಲ್ಯಾಣ ಯೋಜನೆ ವಿಷಯವಾಗಿ ರೈತರು ಮತ್ತು ಅಧಿಕಾರಿಗಳ ಮದ್ಯೆ ಚರ್ಚೆ ನಡೆದು ಸಭೆ ಮುಗಿದ ಬಳಿಕವೂ ಕಚೇರಿ ಮುಂದೆ ವಾಕ್ಸಮರ ನಡೆಯಿತು.
ಆರೋಗ್ಯ ಇಲಾಖೆ ಅಧಿಕಾರಿ ಡಾ.ಸೋಪಿಯಾ ದಾಸರಿ ಸಭೆಗೆ ಹಾಜರಾಗದೆ ಅವರ ಅದೀನದ ಅಧಿಕಾರಿಗಳನ್ನು ಸಭೆಗೆ ಕಳಿಸಿದ ವಿಷಯಕ್ಕೆ ಆಕ್ಷೇಪ ವ್ಯಕ್ತವಾಯಿತು.
ಇನ್ನೂ ಕೊನೆಯಲ್ಲಿ ಪ್ರತಿ ಇಲಾಖೆಗಳ ಪ್ರಗತಿ ಪರಿಶೀಲನೆ ಸರಳವಾಗಿ ನಡೆದು ಇನ್ನೂ ಇಲಾಖೆಗಳ ವರದಿ ಬಾಕಿ ಇರುವಾಗಲೇ ತ್ರೈಮಾಸಿಕ ಸಭೆ ಮುಕ್ತಾಯಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಸರ್ವ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
12/11/2024 07:08 pm