ಹುಬ್ಬಳ್ಳಿ: ವಾಹನ ಸವಾರರೇ ಮೈಮೇಲೆ ಪ್ರಜ್ಞೆಯಿಂದ ವಾಹನ ಚಲಾಯಿಸಿ... ಯಾಕಂದ್ರೆ ಇಲ್ಲೊಂದಿಷ್ಟು ರೋಡ್ ಬ್ರೇಕರ್‌ಗಳು ಜೀವಕ್ಕೆ ಕುತ್ತಾಗುತ್ತಿವೆ. ಏನಪ್ಪಾ ಇವರು ಹೀಗೆ ಹೇಳುತ್ತಿದ್ದಾರೆ ಅಂತೀರಾ ನೀವೇ ನೋಡಿ ಹೇಗಿವೆ ಅಂತೆ...
ನೋಡಿದ್ರಲ್ಲ ವೀಕ್ಷಕರೆ,,,,, ಈ ರೋಡ್ ಹಂಪ್‌ಗಳು ಯಾವ ರೀತಿ ಇವೆ ಅಂತ. ಒಂದು ಕಡೆ ಹಾಳಾದ ರಸ್ತೆ, ಇನ್ನೊಂದಡೆ ಧೂಳಿನ ಗೋಳು. ಹುಬ್ಬಳ್ಳಿಯ ಹೊಸೂರು ಸರ್ಕಲ್‌ನಿಂದ ಚನ್ನಮ್ಮ ಸರ್ಕಲ್‌ವರೆಗೆ ವಾಹನ ಸವಾರರು ಬರಬೇಕಾದ್ರೆ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣವೇ ಈ ರೋಡ್ ಹಂಪ್‌ಗಳು. ಕೇವಲ ಮೂರು ಕಿ.ಮಿ ಒಳಗೆ ಸುಮಾರು 15ಕ್ಕೂ ಹೆಚ್ಚು ರೋಡ್ ಹಂಪ್‌ಗಳಿವೆ. ರಸ್ತೆ ಕಿತ್ತು ಬಿದ್ದು ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಹೊಸೂರು ಕ್ರಾಸ್‌ನಿಂದ ಚನ್ನಮ್ಮ ಸರ್ಕಲ್ ತಲುಪಲು ದೊಡ್ಡ ಯುದ್ಧವನ್ನೆ ಗೆದ್ದು ಬಂದವೆಂದು ನಿರಾಳವಾಗುವಂತಾಗಿದೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳಾದ ಹೊಸೂರು ರಸ್ತೆ, ಇಂದಿರಾ ಗಾಜಿನ ಮನೆಯ ಎದುರಿ ರಸ್ತೆಯಲ್ಲಿರುವ ರೋಡ ಹಂಪ್ಸಗಳು ಸಂಪೂರ್ಣ ಹಾಳಿದ್ದು ಗುಂಡಿಗಳಾಗಿ ಮಾರ್ಪಾಡಾಗಿವೆ. ಅವೈಜ್ಞಾನಿಕವಾಗಿ ನಿರ್ಮಿಸಿದ ವೇಗ ನಿಯಂತ್ರಕ ಪೇವರ್ಸಗಳು ಕಿತ್ತು ಹೋಗಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾವೆ.
ಒಟ್ಟಿನಲ್ಲಿ ಹೇಳುವುದಾದರೆ ಈ ರೋಡ್ ಹಂಪ್ಸ್‌ಗಳು ಜನರ ಜೀವಕ್ಕೆ ಕುತ್ತಾಗಿದ್ದಂತು ನಿಜ. ಬಕ ಪಕ್ಷಿಯಂತೆ ರೋಡ್ ಹಂಪ್ಸ ಕಾದುಳಿತಿವೆ. ಎಚ್ಚರ ತಪ್ಪಿದರೇ ಅನಾಹುತ ತಪ್ಪಿದ್ದಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ರೋಡ್ ಹಂಪ್ಸ್‌ಗಳನ್ನು ತೆಗೆದು ನಾರ್ಮಲ್ ರೋಡ್ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
22/11/2024 06:41 pm