ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ವಾರ್ಡ್ ನಂ.34ರ ಗಾರ್ಡನ್‌ನಲ್ಲಿ ಮಕ್ಕಳ ಆಟಿಕೆ ವಸ್ತುಗಳ ದುರ್ಬಳಕೆ, ಹೇಳೋರಿಲ್ಲ.. ಕೇಳೋರಿಲ್ಲ…!

ಹುಬ್ಬಳ್ಳಿ: ಚಿಕ್ಕ ಮಕ್ಕಳಿಗೆ ಆಟ ಆಡಲು ಗಾರ್ಡನ್ ಗಳಲ್ಲಿ ಕೆಲವೊಂದು ವಸ್ತುಗಳನ್ನು ಕಟ್ಟಿರುತ್ತಾರೆ. ಆದ್ರೆ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು, ಕ್ಲಾಸ್‌ಗೆ ಹೋಗೋದನ್ನ ಬಿಟ್ಟು ಗಾರ್ಡನ್ ಒಳಗೆ ಬಂದು ಚಿಕ್ಕ ಮಕ್ಕಳ ಆಟ ಆಡುವ ವಸ್ತುಗಳ ಮೇಲೆ ಕುಳಿತು ಆಟ ಆಡ್ತಿದ್ದಾರೆ. ಹುಬ್ಬಳ್ಳಿಯ ವಾರ್ಡ್ ನಂಬರ್ 34 ರಲ್ಲಿ ಬರುವ ಸಮರ್ಥ ಕಾಲೇಜು ಪಕ್ಕದಲ್ಲಿ ಇಂತಹ ದೃಶ್ಯಗಳು ಕಂಡು ಬರ್ತಿದ್ದು, ಯಾರೂ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.

ನೋಡಿದ್ರಲ್ಲ ವೀಕ್ಷಕರೇ ಮಕ್ಕಳು ಆಟ ಆಡಲಿ, ನಲಿಯಲಿ ಎಂದು ಮಹಾನಗರ ಪಾಲಿಕೆಯಿಂದ ಗಾರ್ಡನ್‌ ಗಳಲ್ಲಿ ಆಟಿಕೆ ವಸ್ತುಗಳನ್ನು ನಿರ್ಮಿಸಿದ್ದಾರೆ. ಆದ್ರೆ ಅಲ್ಲಿ ಆಡೋರು ಬೇರೆಯವರಾಗಿದ್ದಾರೆ. ಸಮರ್ಥ ಕಾಲೇಜು ಕೆಲ ವಿದ್ಯಾರ್ಥಿಗಳು ಮಕ್ಕಳು ಆಡುವ ವಸ್ತುಗಳ ಮೇಲೆ ಕುಳಿತು ಹಾಳು ಮಾಡುತ್ತಿದ್ದಾರೆ. ಯಾರಾದ್ರು ಬಂದು ಹೇಳಿದ್ರೆ ಅವರಿಗೆ ಅವಾಜ್ ಕೂಡ ಹಾಕ್ತಿದ್ದಾರಂತೆ. ಹೀಗೆ ಮಕ್ಕಳ ವಸ್ತುಗಳ ಮೇಲೆ ದೊಡ್ಡವರು ಕುಳಿತರೆ ಆದಷ್ಟು ಬೇಗನೆ ಹಾಳಾಗುತ್ತವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಾರ್ಡನ್ ಗಳಲ್ಲಿ ಆಟಿಕೆ ವಸ್ತುಗಳನ್ನು ನಿರ್ಮಿಸಿದ್ದಾರೆ. ಆದ್ರೆ ಹೀಗೆ ಹಾಳಾಗುತ್ತಿವೆ. ಕೂಡಲೇ ಪಾಲಿಕೆ ಅಧಿಕಾರಿಗಳು ಇಂತಹ ಗಾರ್ಡನ್‌ಗಳಲ್ಲಿ ಭದ್ರತೆ ವ್ಯವಸ್ಥೆಯನ್ನು ಮಾಡಿ, ವಸ್ತುಗಳನ್ನು ಉಳಿಸಿಕೊಳ್ಳಬೇಕಿದೆ.

Edited By : Suman K
Kshetra Samachara

Kshetra Samachara

22/11/2024 04:43 pm

Cinque Terre

13.13 K

Cinque Terre

2

ಸಂಬಂಧಿತ ಸುದ್ದಿ