ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಕಾಲುವೆ ಕಾಮಗಾರಿಗೆ ಮುಕ್ತಿ - ಬಹುಕೋಟಿ ವೆಚ್ಚದಲ್ಲಿ ಕಾರ್ಯ ಪ್ರಾರಂಭ

ಅಳ್ನಾವರ: ಸುಮಾರು ಐದು ಸಾವಿರ ಎಕರೆ ಉಳುಮೆ ಭೂಮಿಗೆ ನಿರಂತರವಾಗಿ ನೀರಾವರಿ ಒದಗಿಸುವ ಅಳ್ನಾವರ ತಾಲೂಕಿನ ಹುಲಿಕೇರಿ ಇಂದಿರಮ್ಮನ ಕೆರೆಯ ತಡೆಗೋಡೆಯು ಕಳೆದ 2019ರಲ್ಲಿ ಪ್ರವಾಹಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿ ಹೋಗಿತ್ತು. ಇದರಿಂದ ತಡೆಗೋಡೆ ಅಷ್ಟೇ ಅಲ್ಲದೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳು ಸಹ ಹಾನಿಗೊಳಗಾಗಿದ್ದವು. ಹೀಗಾಗಿ ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ಜೀವಾಳವಾಗಬೇಕಿದ್ದ ಇಂದಿರಮ್ಮನ ಕೆರೆಯ ನೀರು ಅವ್ಯವಸ್ಥಿತವಾಗಿ ಹರಿದು ಬೆಳೆಗಳು ಹಾನಿಯಾಗಿದ್ದವು.

ಇಂದಿರಮ್ಮನ ಕೆರೆಗೆ ಅತ್ಯಂತ ಅವಶ್ಯವಿರುವ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ನಿರ್ಮಾಣಕ್ಕೆ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗಿದ್ದವು. ರೈತರಿಂದ ಉನ್ನತ ಮಟ್ಟದಲ್ಲಿ ಹೋರಾಟಗಳು ನಡೆದವು. ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾದ ಬೆನ್ನಲ್ಲೇ ಸರ್ಕಾರ ಇದೀಗ ಹುಲಿಕೇರಿ ಇಂದಿರಮ್ಮನ ಕೆರೆಗೆ ಕಾಲುವೆ ನಿರ್ಮಾಣಕ್ಕೆ ಆರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಇಂದು ಸಚಿವ ಸಂತೋಷ್ ಲಾಡ್ ಕಾಲುವೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಎರಡು ಕಾಲುವೆಗಳ ನಿರ್ಮಾಣದಿಂದ ಹುಲಿಕೇರಿ, ಕಾಸೇನಟ್ಟಿ, ಅಳ್ನಾವರ, ಕಡಬಗಟ್ಟಿ, ಕಕ್ಕೇರಿ ಗ್ರಾಮದ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಬಹುದು. ರಣ ಬೇಸಿಗೆಯಲ್ಲೂ ರೈತರ ಜಮೀನುಗಳಿಗೆ ನೀರನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಬಹುದಾಗಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Vinayak Patil
Kshetra Samachara

Kshetra Samachara

22/11/2024 07:11 pm

Cinque Terre

24.58 K

Cinque Terre

3

ಸಂಬಂಧಿತ ಸುದ್ದಿ