ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಲ್ಪಸಂಖ್ಯಾತರ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಚಿಂತನೆ ನಾಚಿಕೆಗೇಡು - ಶಾಸಕ ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ: ಅಲ್ಪಸಂಖ್ಯಾತರ ಗುತ್ತಿಗೆದಾರರಿಗೆ ಮೀಸಲಾತಿ ನೀಡಲು ಸರಕಾರ ನಡೆಸಿರುವ ಚಿಂತನೆ ವಿಚಾರವಾಗಿ ಸರಕಾರ ಅಲ್ಪಸಂಖ್ಯಾತರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ನಾಚಿಕೆಗೇಡು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ಈ ಹಿಂದೆ‌ ಏನು ಮಾಡಿದ್ದಾರೆ.? ಹಳೇ ಹುಬ್ಬಳ್ಳಿಯ ಗಲಿಭೆ ಪ್ರಕರಣದಲ್ಲಿ ಅಮಾಯಕರು ಎನ್ನುತ್ತಾರೆ. ಅವರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ. ಇನ್ನೂ ಅನೇಕ ಕಡೆಗಳಲ್ಲಿನ ಪ್ರಕರಣದಲ್ಲಿ ಅವರ ಪರವಾಗಿ ಸರ್ಕಾರ ನಿಲ್ಲುತ್ತದೆ.‌ ಆದರೆ ರಾಜ್ಯದ ಮೂರು ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿ ಬಳಕೆ ಸರಿಯಲ್ಲ ಅಲ್ಪಸಂಖ್ಯಾತರ ತುಷ್ಟೀಕರಣ ಪರಮೋಚ್ಚ ಸ್ಥಾನಕ್ಕೆ ಹೋಗಿದ್ದು, ನಿಮ್ಮದೇ ಆದ ಶಾಸಕರು ತಮ್ಮ ಬಗ್ಗೆ ಏನು ಮಾತನಾಡುತ್ತಾ ಇದ್ದಾರೆ ಎಂದು ಮೊದಲು ತಿಳಿದುಕೊಳ್ಳಿ ಎಂದರು.

ಕರ್ನಾಟಕ ಸರಕಾರದ ಭ್ರಷ್ಟಾಚಾರ ಆರೋಪದಲ್ಲಿ ಪಿಎಂ ಮೋದಿ ರಾಜೀನಾಮೆ ಕೊಡಬೇಕು ಎಂಬ ಸಿಎಂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರ ಆರೋಪದಲ್ಲಿ ಪ್ರಧಾನಿ ನರೇಂದ್ರ ರಾಜೀನಾಮೆ ಕೊಡಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಯ ಎಷ್ಟರ ಮಟ್ಟಿಗೆ ಸರಿ ಇದೆ. ತಮ್ಮ ಸರಕಾರದ‌ ಮೇಲೆ ಎಷ್ಟು ಹಗರಣಗಳ ಆರೋಪ ಇದೆ ನೋಡಿ. ತಮ್ಮ ಮೇಲೆಯೇ ಮುಡಾ ಹಗರಣ ಆರೋಪ ಬಂದಾಗ ‌ನಾವು ಹೋರಾಟ ಮಾಡಿದ್ದೆವು. ಈ ವಿಚಾರವಾಗಿ ಆರಂಭದಲ್ಲಿ ನಾವು ಹೋರಾಟ ಮಾಡುವಾಗ ನಿರಾಕರಣೆ ಮಾಡಿದ್ದೀರಿ. ಸದನದಲ್ಲಿ ವಿರೋಧ ಪಕ್ಷದನಾಯಕ ಆರ್‌.ಅಶೋಕ ಚರ್ಚೆಗೆ ಅವಕಾಶ ಕೊಡಬೇಕು ಎಂದು ಕೇಳಿದರು.

ಇದಕ್ಕೆ ಸ್ಪಂದನೆ ಮಾಡಲಿಲ್ಲ ನಂತರ ಹೋರಾಟ ಮಾಡಲು ಸದನದಲ್ಲಿಯೇ ಧ್ವನಿ ಎತ್ತಿದರು. ಇದಕ್ಕೆ ಭಾರತೀಯ ಜನತಾ ಪಕ್ಷದ ಶಾಸಕರು ಸಹ ಉಗ್ರವಾಗಿ ಹೋರಾಟಕ್ಕೆ ಮುಂದಾದರು. ಸ್ವತಃ ಸಿಎಂ ಮುಡಾ ಹಗರಣದಲ್ಲಿ 187 ಕೋಟಿಯಷ್ಟು ಆಗಿಲ್ಲ. ಕೇವಲ 87 ಕೋಟಿ ಹಗರಣ ಆಗಿದೆ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಮೇಲೆ ರೌಡಿ ಶೀಟರ್ ಇಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿಚಾರ ನಾವು ಮೊದಲು ಹೇಳಿದ್ದು ಅಲ್ಲ ಅವರ ಪಕ್ಷದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರೇ ಹೇಳಿದ್ದರು. ನಂತರ ಹಾವೇರಿ ಎಸ್ ಪಿ ಸಹ ಹೇಳಿದರು ಯಾಸೀರ್ ಖಾನ್ ಮೇಲೆ ರೌಡಿ ಶೀಟರ್ ಇದೆ ಅಂತಾ ಹೇಳಿದರು. ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಹೇಳಿಕೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ರೌಡಿ ಶಿಟರ್ ಅಂತಾ ಆದರೆ ನಂತರ ಎಸ್ ಪಿ ಹೇಳಿಕೆ ನೀಡಿದ ನಂತರ ಜನರು ವಿಚಾರ ಮಾಡಲು ಆರಂಭ ಮಾಡಿದರು. ಈಗ ಏಕಾಏಕಿ ‌ಸರಕಾರ ಉಲ್ಟಾ ಹೊಡೆದಿದ್ದು ಗೃಹ ಸಚಿವರು ಎಸ್ ಪಿ ಮೇಲೆ ಒತ್ತಡ ಹಾಕಿ ಯಾಸೀರ್ ಖಾನ್ ಮೇಲೆ ಯಾವುದೇ ಕೇಸ್ ಇಲ್ಲ ಎಂದು ಹೇಳಿಕೆ ನೀಡಿಸಿದ್ದಾರೆ ಎಂದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/11/2024 02:41 pm

Cinque Terre

34.24 K

Cinque Terre

2

ಸಂಬಂಧಿತ ಸುದ್ದಿ