ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಕಾಂಗ್ರೆಸ್‌ನವರು ದೊಡ್ಡ ಲಫಡಾ ಮಾಡಿ ದುಡ್ಡು ಮಾಡಿದ್ದಾರೆ' - ಅರವಿಂದ ಬೆಲ್ಲದ ಕಿಡಿ

ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಮುಡಾದಲ್ಲಿ, ವಾಲ್ಮೀಕಿ ನಿಗಮದಲ್ಲಿ ದೊಡ್ಡ ದೊಡ್ಡ ಲಫಡಾ ಮಾಡಿದ್ದಾರೆ.‌ ಇವರು ಸ್ವಚ್ಛವಾಗಿದ್ದರೇ ಯಾವ ಇಡಿ(ಜಾರಿ ನಿರ್ದೇಶನಾಲಯ) ಏನು ಮಾಡ್ತಿತ್ತು. ಇವರು ದೊಡ್ಡ ದೊಡ್ಡ ಪ್ರಮಾಣದಲ್ಲಿ ಹಗರಣ ಮಾಡಿ ಹಣ ಹೊಡೆದಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ವ್ಯಂಗ್ಯವಾಡಿದರು.

ಇಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ಸಿನವರು ಮುಡಾದಲ್ಲಿ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ಲಫಡಾ ಮಾಡಿದ್ದಾರೆ. ಲೂಟಿ ಮಾಡಿಲ್ಲ ಎನ್ನುವುದೇ ಆದರೇ ಇವರ ಹತ್ತಿರ ಅಷ್ಟೊಂದು ದುಡ್ಡು ಬರಲು ಹೇಗೆ ಸಾಧ್ಯ. ಸಾವಿರಾರು ಕೋಟಿ ಲೂಟಿ ಮಾಡಿ ಏಷ್ಯಾದಲ್ಲಿ ಅತ್ಯಂತ ದೊಡ್ಡ ಪಬ್ ಕಟ್ಟಿಸಿರುವುದು ಸೂಕ್ತ ನಿದರ್ಶನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/11/2024 12:56 pm

Cinque Terre

118.53 K

Cinque Terre

12

ಸಂಬಂಧಿತ ಸುದ್ದಿ