ಹುಬ್ಬಳ್ಳಿ: ಇಡೀ ರಾಜ್ಯಾದ್ಯಂತ ವಕ್ಫ್ ಹಾವಳಿ ಜೋರಾಗಿದ್ದು, ಇದು ಸಾಮಾನ್ಯ ಜನರಿಗೆ ತಲೆ ನೋವು ತರಿಸಿದೆ. ಇದೀಗ ವಕ್ಫ್ ಹುಬ್ಬಳ್ಳಿ ಧಾರವಾಡದಲ್ಲಿ ಕಾಲಿಟ್ಟಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ನಗರದಲ್ಲಿ ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಆರಂಭವಾಗಿದೆ. ಅವಳಿ ನಗರದ ನಿವಾಸಿಗಳೇ ನಿಮ್ಮ ನಿಮ್ಮ ಆಸ್ತಿಗಳ ಮೇಲೆ ನಿಗಾ ವಹಿಸಿ ಹುಷಾರಾಗಿರಿ...!
ಹೌದು,,, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಸೂಚನೆಯಂತೆ, ಟೌನ್ ಪ್ಲಾನಿಂಗ್, ಹಾಥ್ ನಕಾಶೆ ಹಾಗೂ ಕೆಲ ದಾಖಲಾತಿಗಳ ಸಮೇತ ವಿವಿಧ ಸ್ಥಳಗಳಲ್ಲಿ ವಕ್ಫ್ ಆಸ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗ ಹುಬ್ಬಳ್ಳಿಯ ಕೆಲವೊಂದು ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಸರ್ವೆ ಆಫಿಸರ್ ಎಂದು ಸುಳ್ಳು ಹೇಳಿ ವಕ್ಫ್ ಆಸ್ತಿಯ ವಿಚಾರವಾಗಿ ಹುಬ್ಬಳ್ಳಿಯನ್ನು ಪ್ರದಕ್ಷಿಣೆ ಹಾಕುತ್ತಿರುವ ಕಂದಾಯ ಇಲಾಖೆ ಮತ್ತು ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಆದ್ರೆ ಇದ್ದ ವಿಚಾರವನ್ನು ಇದ್ದಂಗೇ ಹೇಳಿದರೆ ಅಲ್ಲಿಂದ ವಾಪಸ್ ಬರುವುದು ಕಷ್ಟವಾಗಬಹುದು ಎಂದು ಅಧಿಕಾರಿಗಳು ಸ್ಮಾರ್ಟ್ ಸಿಟಿ ಸರ್ವೆ ಮಾಡುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ.
ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ವಕ್ಫ್ ಭೂಮಿ ಶೋಧ ಹಾಗೂ ಸರ್ವೆ ಕಾರ್ಯ ಆರಂಭ ಮಾಡಿರುವ ಕಂದಾಯ ಹಾಗೂ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು, ಕಳೆದ ವಾರದಿಂದ ಹುಬ್ಬಳ್ಳಿಯ ಆನಂದ ನಗರ, ಟಿಪ್ಪು ನಗರ ಸೇರಿದಂತೆ ಹಳೇ ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಘಂಟಿಕೇರಿ, ಬೆಂಡಿಗೇರಿ, ಗಣೇಶ ಪೇಟ್, ದುರ್ಗದ ಬಯಲು ಹಾಗೂ ಸಿಬಿಟಿ ಸುತ್ತಮುತ್ತಲೂ ವಕ್ಫ್ ಆಸ್ತಿಯ ಸರ್ವೆ ಕಾರ್ಯ ಆರಂಭಿಸಿದ್ದಾರೆ. ಹುಬ್ಬಳ್ಳಿ ಜನರೇ ಹುಷಾರ್ ಆಗಿರಿ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಏನು ಹೇಳಿದ್ದಾರೆ ಕೇಳಿ.
ಇನ್ನು ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷರೂ ಹುಬ್ಬಳ್ಳಿಗೆ ಆಗಮಿಸಿ ರೈತರಿಂದ ಅಹವಾಲು ಪಡೆದಿದ್ದಾರೆ. ಪ್ರಗತಿಪರ ರೈತರು ಮತ್ತು ಚಿಂತಕರೊಂದಿಗೆ ಸಭೆ ನಡೆಸಿದ್ದಾರೆ. ಈಗ ಸ್ಮಾರ್ಟ್ ಸಿಟಿ ಸರ್ವೆ ಎಂದು ನೆಪ ಹೇಳಿ ವಕ್ಫ್ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದಾರೆ. ಜನರೇ ನಿಮ್ಮ ಮನೆಯ ದಾಖಲೆಗಳ ಮೇಲೆ ನಿಗಾ ಇರಲಿ...!
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/11/2024 02:54 pm