ಕುಂದಗೋಳ : ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಕಳೆದ ಹಲವು ದಿನಗಳಿಂದ ಸಂಗ್ರಹವಾಗಿದ್ದ ನೀರನ್ನು ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಹೊರ ಹಾಕಲಾಗುತ್ತಿದೆ.
ಹೌದು ! ಕುಂದಗೋಳ ಪಟ್ಟಣದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆ, ದುರ್ವಾಸನೆ ಹೆಚ್ಚಾಗಿ ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ವಾರ್ಷಿಕ 50 ಲಕ್ಷ ಮೀರಿ 5 ಇಲಾಖೆಗಳಿಂದ ನಿರ್ವಹಣೆ ವೆಚ್ಚ ಪಡೆಯುವ ತಾಲೂಕು ಪಂಚಾಯಿತಿ ನೀರು ಹೊರ ಹಾಕದೆ ಇರುವ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು.
ಇದೀಗ ತಾಲೂಕು ಪಂಚಾಯಿತಿ ಅಧಿಕಾರಿಗಳು ಮಂಗಳವಾರ ಕೊಟ್ಟ ಮಾಹಿತಿಯಂತೆ ಕಟ್ಟಡದಲ್ಲಿ ಸಂಗ್ರಹವಾದ ಕಲುಷಿತ ನೀರನ್ನು ಪೈಪ್ಲೈನ್ ಮೂಲಕ ಹೊರಹಾಕುವ ಕಾರ್ಯ ಕೈಗೊಂಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಶ್ರೀಧರ ಪೂಜಾರ
Kshetra Samachara
13/11/2024 02:47 pm