ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಳೆಗಾಲ ಸರಿದರೂ ಸರಿಯಾಗಲಿಲ್ಲ ರಸ್ತೆ

ಧಾರವಾಡ: ನಮ್ಮ ಜಿಲ್ಲಾ ಕೇಂದ್ರ ಧಾರವಾಡದಿಂದ ವಯಾ ಯಾದವಾಡ, ಉಪ್ಪಿನ ಬೆಟಗೇರಿ ಮ್ಯಾಲ ಹಾದು ಮುಂದ ಬೈಲಹೊಂಗಲಕ್ಕ ಸಂಪರ್ಕ ಕಲ್ಪಿಸುವ ರಸ್ತೆ ದಾಖಲೆಗಳ ಪ್ರಕಾರ ರಾಜ್ಯ ಹೆದ್ದಾರಿ ಅಂತ ಐತ್ರಿ. ಆದ್ರ ಉಪ್ಪಿನ ಬೆಟಗೇರಿಯಿಂದ ಮುಂದ ನಡುವನಿಕೊಪ್ಪದ ಮಟಾ ಸದ್ಯ ಇರೋ ರಸ್ತೆ ಪರಿಸ್ಥಿತಿ ನೋಡಿಬಿಟ್ರ ಇದೇನು ರಾಜ್ಯ ಹೆದ್ದಾರಿನೋ ಅಥವಾ ಹೊಲಕ್ಕ ಹೋಗು ರಸ್ತೆನೋ ಅಂತಾ ನೀವು ತಲಿ ಕೆಡಿಸಿಕೊಳ್ತೀರಿ.

ನೋಡ್ರಿ ನೋಡ್ರಿ ಇದು ಉಪ್ಪಿನ ಬೆಟಗೇರಿ ಗ್ರಾಮದಿಂದ ಮುಂದ ನಡುವಿನಿಕೊಪ್ಪದ ಮಟಾ ಇರೋ ಬೈಲಹೊಂಗಲ ರಸ್ತೆ ಪರಿಸ್ಥಿತಿ. ನಡುವಿನಕೊಪ್ಪ ಮುಂದ ಅದು ಬೆಳಗಾವಿ ಜಿಲ್ಲೆಗೆ ಸಂಬಂಧಪಡತೈತ್ರಿ. ಅಲ್ಲಿ ಮಟಾ ಇರೋ ರಸ್ತೆ ಸಂಪೂರ್ಣ ಕೆಟ್ಟ ಕೆರಾ ಹಿಡದ ಹೋಗೈತಿ ನೋಡ್ರಿ.

ಮ್ಯಾಲೆ ಹಾಕಿದ ಡಾಂಬರು ಪದರ ಪದರ ಆಗಿ ಕಿತಕೊಂಡು ರಸ್ತೆ ಎಲ್ಲಾ ಚಕ್ಕಡಿ ರಸ್ತೆ ಆದಂಗ ಆಗೇತಿ ನೋಡ್ರಿ. ಇದರಾಗ ಚಕ್ಕಡಿ ಸಹಿತ ಅಡ್ಡ್ಯಾಡಾಕ ಬರಲಂಗ ಆಗೇತ್ರಿ. ಮಳಿಗಾಲ ಮುಗೀಲಿ ರಸ್ತೆ ಮಾಡಸ್ತೇವಿ ಅಂತಾ ಅಧಿಕಾರಿಗಳು ಹೇಳ್ತಾರ. ಆದ್ರ, ಈಗ ಮಳಿಗಾಲ ಮುಗದ ಹಳಮಾತ ಆಗೈತಿ. ಇನ್ನೂ ಅಧಿಕಾರಿಗಳಿಗೆ ಮತ್ತ ಜನಪ್ರತಿನಿಧಿಗಳಿಗೆ ಈ ರಸ್ತೆ ಕಾಣಸವಾಲ್ದೇನು ಅಂತ ಸಾರ್ವಜನಿಕರು ಪ್ರಶ್ನೆ ಮಾಡಾಕತ್ತಾರ.

ಈ ರಸ್ತೆ ಏನೋ ಕಾಗದ ಪತ್ರದಾಗ ರಾಜ್ಯ ಹೆದ್ದಾರಿ ಅಂತ ಐತಿ. ಆದ್ರ ಆ ರಾಜ್ಯ ಹೆದ್ದಾರಿ ಇಲ್ಲಿ ಆಗೇ ಇಲ್ಲ. ಇದ್ದಿದ್ದ ರಸ್ತೇನ ಮ್ಯಾಲಿಂದ ಮ್ಯಾಲ ಮ್ಯಾಲಿಂದ ಮ್ಯಾಲ ಪ್ಯಾಚ್ ವರ್ಕ್ ಮಾಡ್ಕೊಂತ ಹೊಂಟಾರ. ನಡುವಿನಕೊಪ್ಪದ ಮಟಾ ಈ ರಸ್ತೆ ನಮ್ಮ ಧಾರವಾಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವ್ಯಾಪ್ತಿಗೆ ಬರತೈತಿ. ನಮ್ಮ ಅಧಿಕಾರಿಗಳಂತೂ ಬರೊಬ್ಬರಿ ಆಫೀಸಿನ್ಯಾಗ ಎಸಿ ರೂಮ್‌ನ್ಯಾಗ ಕುಂದರತಾರ. ಪಾಪ ಅವರಿಗೆ ಏನ ಗೊತ್ತಕೈತಿ ಜನರ ಸಮಸ್ಯೆ? ರಾಜ್ಯ ಸರ್ಕಾರ ಅಂತೂ ಗ್ಯಾರಂಟಿಗೆ ಹಣ ಹೊಂದಿಸೋದ್ರಾಗ ಬ್ಯುಸಿ ಆಗೇತಿ. ಅದರ ಮಧ್ಯೆ ಇಂತಾ ಅನೇಕ ರಸ್ತೆಗಳು ಹದಗೆಟ್ಟಿದ್ದು, ಅವುಗಳ ರಿಪೇರಿಗರ ಸ್ವಲ್ಪ ರೊಕ್ಕಾ ಕೊಟ್ರ ರಸ್ತೆ ಸುಧಾರಣೆ ಅಕ್ಕಾವ ನೋಡ್ರಿ. ದೌಡ ಈ ರಸ್ತೆ ಸುಧಾರಣೆ ಮಾಡೋ ಕೆಲಸಾನ ಅಧಿಕಾರಿಗಳು ಮತ್ತ ಶಾಸಕ ವಿನಯ್ ಕುಲಕರ್ಣಿ ಅವ್ರು ಮಾಡಬೇಕಾಗೈತಿ ನೋಡ್ರಿ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/11/2024 04:20 pm

Cinque Terre

54.03 K

Cinque Terre

5

ಸಂಬಂಧಿತ ಸುದ್ದಿ