ಹುಬ್ಬಳ್ಳಿ : ಕಾಂಗ್ರೆಸ್ ಸರಕಾರ ನಾಲ್ಕು ಗ್ಯಾರಂಟಿ ಯೋಜನೆ ಜೊತೆ "ಗಲ್ಲಿ ಗಲ್ಲಿಗೆ ಎಣ್ಣೆ ಗ್ಯಾರಂಟಿ' ಯೋಜನೆ ಜಾರಿಗೊಳಿಸಿದಂತೆ ಕಾಣುತ್ತೆ. ಏಕೆಂದ್ರೆ ಮಂದಿರ, ಆಸ್ಪತ್ರೆ ಶಾಲೆಗಳನ್ನು ನೋಡದೆ ಕಂಡ ಕಂಡಲ್ಲಿ MRP ಎಣ್ಣೆ ಅಂಗಡಿ ಓಪನ್ ಮಾಡಲು ಪರವಾನಿಗೆ ಕೊಟ್ಟಿದೆ.
ಗ್ಯಾರಂಟಿ ಬಿಟ್ಟಿ ಯೋಜನೆಗಳಿಂದ ಖಾಲಿ ಆಗಿರುವ ಬೊಕ್ಕಸ ತುಂಬಲು ಪಾಪ ಸರಕಾರವಾದ್ರೂ ಏನೂ ಮಾಡೀತು? ಈಗ ಅದಕ್ಕೆ ಉಳಿದಿರುವ ದಾರಿ ಅಂದ್ರೆ ಹಾದಿ ಬೀದಿಗಳಲ್ಲಿ ಬಿಂದಾಸ್ ಆಗಿ ಲಿಕರ್ ಶಾಪ್ ತೆರೆಯಲು ಪರ್ಮಿಷನ್ ಕೊಡೋದು.
ಸಾಕಷ್ಟು ವಿರೋಧದ ನಡುವೆಯೂ ನವನಗರದ ಬಸವೇಶ್ವರ ವೃತ್ತದಿಂದ ಕರ್ನಾಟಕ ಸರ್ಕಲ್ ರಸ್ತೆ ಮಧ್ಯದಲ್ಲಿ MRP ಲಿಕರ್ ಹೌಸ್ ತೆರೆಯಲಾಗಿದೆ. ಆ ಶಾಪ್ ಎದುರೇ ಡಾ.ಎಂ.ಎಂ ಜೋಶಿ ಅವರ ಕಣ್ಣಿನ ಆಸ್ಪತ್ರೆ ಇದೆ. ಪಕ್ಕದಲ್ಲಿಯೇ ಬನ್ನಿ ಮಹಾಕಾಳಿ ದೇವಸ್ಥಾನವಿದೆ. ಇದೆಲ್ಲ ಗೊತ್ತಿದ್ದರೂ ರಸ್ತೆಯಲ್ಲಿ MRP ಲಿಕರ್ ಶಾಪ್ ತೆರೆಯಲು ಅವಕಾಶ ಕಲ್ಪಿಸಿದ್ದು ಆಘಾತಕರ ಸಂಗತಿ.
ಇಲ್ಲಿ ಆರಂಭವಾದ MRP ಲಿಕರ್ ಶಾಪ್ ಬಂದ್ ಮಾಡಬೇಕೆಂದು ಒತ್ತಾಯಿಸಿ ಅನೇಕ ಮಹಿಳೆಯರು ಕಳೆದ ಎರಡು ದಿನಗಳಿಂದ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಲಿಕೆ ಸದಸ್ಯೆ ಶ್ರೀಮತಿ ಸುನಿತಾ ಮಾಳವದಕರ ನೇತೃತ್ವದಲ್ಲಿ ಗುರುವಾರ ಮಹಿಳೆಯರು ಬೀದಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗಿ, ನ್ಯಾಯ ದೊರೆಯುವವರೆಗೆ ಹೋರಾಟ ಮಾಡುವುದಾಗಿ ಹೇಳಿದರು.
ಪಾಪ ನಮ್ಮ ಪೊಲೀಸರು ಅಲ್ಲಿ ಸಂಚಾರ ನಿಯಂತ್ರಣ ಮಾಡೋದ್ರ ಜೊತೆ ಎಣ್ಣೆ ಅಂಗಡಿಗೂ ರಕ್ಷಣೆ ನೀಡಬೇಕಾಗಿರೋದು ದುರ್ದೈವದ ಸಂಗತಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/11/2024 10:52 pm