ಹುಬ್ಬಳ್ಳಿ: ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿನ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆ ಪೊಲೀಸರ ದಾಳಿ ಮಾಡಿದ ವೇಳೆ ಪೊಲೀಸರ ಹ್ಯಾಂಡಿ ಕ್ಯಾಮ್ ನಾಶ ಮಾಡಿದ್ದಲ್ಲದೇ, ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ನಟೋರಿಯಸ್ ರೌಡಿ ಶೀಟರ್ ಸೈo ಟಿಸ್ಟ್ ಮಂಜ್ಯಾ, ಇದೀಗ ಕಮಿಷನರ್ ಭಯಕ್ಕೆ ಕೋರ್ಟ್‌ಗೆ ಶರಣಾಗಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ 6ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಸೇರಿ ಇಸ್ಪೀಟ್ ದಂಧೆ ನಡೆಸುತ್ತಿದ್ದ ಮಾಹಿತಿ ಆಧರಿಸಿ ಸಿಸಿಬಿ ಹಾಗೂ ಶಹರ ಪೊಲೀಸರು ದಾಳಿಯನ್ನು ಮಾಡಿದ್ದರು. ಈ ವೇಳೆ 5 ರೌಡಿ ಶೀಟರ್ ಗಳು ಲಾಕ್ ಆಗಿದ್ದರು. ಆದ್ರೆ ನಟೋರಿಯಸ್ ರೌಡಿ ಶೀಟರ್ ಸೈoಟಿಸ್ಟ್ ಮಂಜ್ಯಾ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದ.
ಹೀಗಾಗಿ ಪೊಲೀಸರು ಈ ಪ್ರಕರಣದಲ್ಲಿ ರೌಡಿ ಶೀಟರ್‌ಗಳು ಸೇರಿದಂತೆ 19 ಜನರನ್ನು ಜೈಲಿಗೆ ಅಟ್ಟಿದ್ದರು. ನಂತರ ತಲೆ ಮರೆಸಿಕೊಂಡಿದ್ದ ಸೈoಟಿಸ್ಟ್ ಮಂಜ್ಯಾನನ್ನು ಪತ್ತೆ ಮಾಡಲು ಕಮಿಷನರ್ ಎನ್ ಶಶಿಕುಮಾರ್ ವಿಶೇಷ ತಂಡವನ್ನು ರಚಿಸಿ ತಮ್ಮದೇ ಶೈಲಿಯಲ್ಲಿ ಈತನನ್ನು ಬಂಧಿಸಲು ಪ್ಲ್ಯಾನ್ ಹಾಕಿದ್ದರು. ಇದನ್ನರಿತ ಸೈoಟಿಸ್ಟ್ ಮಂಜ್ಯಾ ಭಯದಿಂದ ಕೋರ್ಟ್‌ಗೆ ಶರಣಾಗಿದ್ದು ಆತನನ್ನು ಹುಬ್ಬಳ್ಳಿಯ ಸಬ್ ಜೈಲಿಗೆ ರವಾನಿಸಲಾಗಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/11/2024 03:55 pm