ಧಾರವಾಡ: ನಾಲ್ಕು ವರ್ಷದ ಮಗುವಿನ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಸ್ಮಶಾನದಲ್ಲಿ ಇಂದು ಬೆಳ್ಳಿಗ್ಗೆ ನಡೆಸಲಾಗುತ್ತಿದೆ.
ನವೆಂಬರ್ 8 ರಂದು ಯಮನೂರು ಗ್ರಾಮದ ವೆಂಕಪ್ಪ ಹಾಗೂ ಶಾಂತಾ ದಂಪತಿಯ 3 ವರ್ಷದ ಮಗ ಯಲ್ಲಪ್ಪ ಮನೆಯ ಹಿತ್ತಲ ಬಳಿಯಲ್ಲಿ ಆಟಡುತ್ತಿದ್ದಾಗ ಕಬ್ಬಿಣದ ರಾಡ್ ಬಿದ್ದು ಮಗು ಸಾವನಪ್ಪಿದೆ ಎಂದು ಮನೆಯ ಅಕ್ಕ ಪಕ್ಕದವರಾಗಿದ್ದ ನಾಗಲಿಂಗ ಎಂಬಾತ ಹೇಳಿದ್ದ. ನಂತರ ಗ್ರಾಮದ ಹಿರಿಯರೆಲ್ಲರು ಸೇರಿ ಯಮನೂರಿನಲ್ಲಿನ ಸ್ಮಶಾನದಲ್ಲಿ ಮಗುವಿನ ಅಂತ್ಯಕ್ರಿಯೆ ಮಾಡಲಾಗಿತ್ತು.
ಅಂತ್ಯಕ್ರಿಯೆ ಎಲ್ಲಾ ಮುಗಿದ ಬಳಿಕ ಗ್ರಾಮದ ನಾಗಲಿಂಗ ಎಂಬಾತ ನಾಪತ್ತೆಯಾಗಿದ್ದು, ಇದರಿಂದ ಪೋಷಕರಿಗೆ ನನ್ನ ಮಗನನ್ನು ಮನೆಯ ಅಕ್ಕ ಪಕ್ಕದವರೇ ಕೊಲೆ ಮಾಡಿದ್ದಾರೆ ಎಂದು ಇದೀಗ ನವಲಗುಂದ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಹೀಗಾಗಿ ಇಂದು ಬೆಳ್ಳಿಗ್ಗೆ ಯಮನೂರಿನ ಸ್ಮಶಾನದಲ್ಲಿ ತಹಶೀಲ್ದಾರ್ ಸುಧೀರ್ ಹಾಗೂ ಪಿಎಸ್‌ಐ ಜನಾರ್ಧನ್ ಹೂತಿಟ್ಟ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಸದ್ಯ ನವಲಗುಂದ ಪೊಲೀಸರು ಶಾಂತಾ ನೀಡಿದ ದೂರಿನ ಅನ್ವಯ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಶವದ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವೇ ಮಗುವಿನ ಸಾವಿನ ರಹಸ್ಯ ತಿಳಿದು ಬರಲಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/11/2024 01:21 pm