ನವಲಗುಂದ : ಭವ್ಯ ಭಾರತದ ಕನಸನ್ನು ಕಟ್ಟುವಂತಹ ಮುಂದಿನ ಪ್ರಜೆಗಳು ಇಂದಿನ ಮಕ್ಕಳು ಹಾಗಾಗಿ ಖುಷಿ-ಖುಷಿಯಾಗಿರಿ ಇವತ್ತು ಮಕ್ಕಳ ದಿನಾಚರಣೆ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ನಗರದ ಉಡಚಮ್ಮ ದೇವಸ್ಥಾನದಲ್ಲಿರುವಂತಹ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-9ರಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗೆ ಉಚಿತ ಬ್ಯಾಗ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶಾಲಾ ಪರಿಕರಗಳನ್ನು ನೀಡಿ ಸಹಕರಿಸುತ್ತಿರುವ ಮಾಬುಸಾಬರವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರಾದ ಎಸ್.ಎಂ ಬೆಂಚಿಕೇರಿ ಮಾತನಾಡಿ ಮಕ್ಕಳ ದಿನಾಚರಣೆಯ ದಿನದಂದು ಸರಕಾರಿ ಶಾಲೆಯ ಮಕ್ಕಳಿಗೆ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅವರು ಉಚಿತವಾಗಿ ಶಾಲಾ ಬ್ಯಾಗ ನೀಡುವುದರ ಮೂಲಕ ಸರಕಾರಿ ಶಾಲೆಗಳ ಮೇಲಿನ ಅಭಿಮಾನವನ್ನು ಎತ್ತಿ ತೋರಿಸಿದ್ದು ಅವರ ಶಿಕ್ಷಣದ ಕಾಳಜಿ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಮುಖ್ಯ ಶಿಕ್ಷಕರಾದ ಬಿ. ಎಸ್.ಮುಳ್ಳೂರ, ಸಹ ಶಿಕ್ಷಕಿ ವಿ.ಎ.ಕುಲಕರ್ಣಿ, ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಅಕ್ಬರ ಮುಲ್ಲಾ ಉಪಸ್ಥಿತರಿದ್ದರು.
Kshetra Samachara
14/11/2024 09:25 pm