ನವಲಗುಂದ : ಸರಕಾರ ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ಹಾಗೂ, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ನೌಕರರಿಗೆ ಮತ್ತು ನೌಕರರ ಅವಲಂಬಿತರಿಗೆ ಅರೋಗ್ಯ ಭದ್ರತೆ, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ನೌಕರರ ಶ್ರೇಯೋಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕಿರಣ ಕಲ್ಲೂರ ಒತ್ತಾಯಿಸಿದರು.
ಅವರು ಪಟ್ಟಣದ ತಾಲ್ಲೂಕಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲ್ಲೂಕಾ ಮಟ್ಟದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ನವಂಬರ್ 27ರ ಒಳಗೆ ಸ್ಪಂದಿಸದಿದ್ದರೆ 27 ರಂದು ಬೆಂಗಳೂರಿನಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ಮಡಿವಾಳರ, ಜಿಲ್ಲಾಉಪಾಧ್ಯಕ್ಷ ನಾಗರಾಜ ನೆರೆಗಲ, ಸಂಘಟನಾ ಕಾರ್ಯದರ್ಶಿ ಬೀರಪ್ಪ ಮೊರಬದ ಸಹಸಂಘಟನಾ ಕಾರ್ಯದರ್ಶಿ ವಿಜಯಲಕ್ಷ್ಮೀ ರಡ್ಡೆರ ಸೇರಿದಂತೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನ ಬಿಲ್ ಕಲೇಕ್ಟರ, ಡಾಟಾ ಎಂಟ್ರಿ ಆಪರೇಟರ್, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ, ವಾಟರ್ ಮ್ಯಾನ್, ಪಂಪು ಆಪರೇಟರ್, ಸ್ವಚ್ಚತೆಗಾರರು ಉಪಸ್ಥಿತರಿದ್ದರು.
Kshetra Samachara
14/11/2024 09:28 pm