ನವಲಗುಂದ : ನ್ಯಾಯವಾದಿಗಳ ಬಹುದಿನದ ಬೇಡಿಕೆಯಾದ ನವಲಗುಂದ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ ಹಾಗೂ ನಿರ್ವಹಣೆ ಸಲುವಾಗಿ ರೂ. 15 ಲಕ್ಷ ಅನುದಾನ ಬಿಡುಗಡೆ ಮಾಡಿ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನವಲಗುಂದ ವಕೀಲರ ಸಂಘದ ಕಟ್ಟಡವನ್ನು ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು ವಕೀಲರ ಸಂಘದ ಪದಾಧಿಕಾರಿಗಳು ದಿನಾಂಕ: 06 ರಂದು ನನಗೆ ಮನವಿ ಸಲ್ಲಿಸಿ ವಕೀಲರ ಸಂಘವನ್ನು ತಾವು ಶಾಸಕರಿದ್ದ ಅವಧಿಯಲ್ಲಿ 3 ಅಂತಸ್ಥಿನ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕಟ್ಟಡವಾಗಿದ್ದು ಪ್ರತಿ ತಿಂಗಳ ವಿದ್ಯುತ್ ಬಿಲ್ ತುಂಬಲು ತೊಂದರೆಯಾಗುತ್ತಿದ್ದು ಅದಕ್ಕೆ ಪರಿಹಾರವೆಂದರೆ ಸೋಲಾರ ಅಳವಡಿಸುವದು. ಆದಕಾರಣ, ಕೂಡಲೇ ಸೋಲಾರ ಅಳವಡಿಸಿ ಶಾಶ್ವತ ಪರಿಹಾರ ಮಾಡಲು ಮನವಿ ಸಲ್ಲಿಸಿದ್ದರು. ಅವರ ಮನವಿ ಮೆರೆಗೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿದಾಗ ಅವರು ಅದಕ್ಕೆ ಸ್ಪಂಧಿಸಿ ಸರ್ಕಾರದಿಂದ 15 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಕೋನರಡ್ಡಿ ಹೇಳಿದರು.
ಎಲ್ಲ ನ್ಯಾಯವಾದಿಗಳ ಪರವಾಗಿ ಎಂ.ಟಿ. ಹೆಬಸೂರ, ಸಿ.ಎಂ. ಪಾಟೀಲ, ಶ್ಯಾಮಸುಂದರ ಡಂಬಳ, ಎಸ್.ಎಂ. ಹಿರೇಮಠ, ಎನ್.ವಾಯ್. ಹೊಂಗಲ ಮುಂತಾದವರು ಮಾತನಾಡಿ ಶಾಸಕರಿಗೆ ಮನವಿ ಸಲ್ಲಿಸಿದಾಗ ತಕ್ಷಣ ಅನುದಾನ ಬಿಡುಗಡೆ ಮಾಡಿ ವಕೀಲರ ಸಂಘಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಕೋನರಡ್ಡಿ ಅವರನ್ನು ಅಭಿನಂದಿಸಿ ಮಾತನಾಡಿದರು.
Kshetra Samachara
14/11/2024 09:49 pm