ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಂಗಗಳ ಕಾಟಕ್ಕೆ "ಕಡಪಟ್ಟಿ" ಆಲ್ಲೋಲ ಕಲ್ಲೋಲ ! ನಿತ್ಯವೂ ಭಯ

ಕುಂದಗೋಳ : ಆ ಒಂದು ಊರಲ್ಲಿ ಚಿಕ್ಕ ಮಕ್ಕಳು ಕೈಯಲ್ಲಿ ಏನಾದ್ರೂ ಹಿಡಿದು ಹೋಗೋ ಹಾಗಿಲ್ಲಾ, ಮಹಿಳೆಯರು ತುಸು ಭಯ ಬಿಟ್ಟು ನಡೆಯೋಹಾಗಿಲ್ಲಾ ಎಲ್ಲಿ ಇರ್ತಾನೋ ಎನೋ ! ಆ ಕಪಿರಾಯ ಚಂಗನೇ ಜಿಗಿದು ಬಂದೇ ಬಿಡ್ತಾನೆ.

ಹೌದು ! ರಸ್ತೆ ರಸ್ತೆಗಳ ಮದ್ಯೆ, ಮನೆ ಮನೆಗಳ ಮೇಲೆ, ಗಿಡ, ಮರ ಹೀಗೆ ಯಾವ ಬಯಲಿನಲ್ಲೂ ನೋಡಿದ್ರು, ಈ ಊರಲ್ಲಿ ಕಪಿರಾಯನದ್ದೇ ಸಾಮ್ರಾಜ್ಯ.

ಈ ಸಾಮ್ರಾಜ್ಯದ ಕಾಟಕ್ಕೆ ಕುಂದಗೋಳ ತಾಲೂಕಿನ ಕಡಪಟ್ಟಿ ಹಳ್ಳಿಗರು ಬೆಚ್ಚಿ ಬಿದ್ದು, ನಮ್ಮೂರಲ್ಲಿರುವ ಮಂಗಗಳ ಉಪಟಳಕ್ಕೆ ಏನಾದ್ರೂ ಪರಿಹಾರ ಮಾಡಿ ಎಂದರೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಾಮಾಜಿಕ ವಲಯ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿರುವ ಕಾರಣ ಆ ಹಳ್ಳಿಗಳಲ್ಲಿ ದಿನೇ ದಿನೇ ಮಂಗಗಳ ಸಂಖ್ಯೆ ಮತ್ತು ಉಪಟಳ ಎರೆಡು ಹೆಚ್ಚಾಗಿದೆ.

ಸದ್ಯ ಕಡಪಟ್ಟಿ ಗ್ರಾಮದಲ್ಲಿ ಎರೆಡು ಕಪಿಗಳ ಸೈನ್ಯ ಬಿಡು ಬಿಟ್ಟಿದ್ದು, ಅಂದಾಜು 200ಕ್ಕೂ ಅಧಿಕ ಮಂಗಗಳಿವೆ ನಿತ್ಯ ಹಳ್ಳಿ ಜನರ ಮನೆಗಳ ಹಂಚು, ತಗಡು, ಶೆಡ್ಡಿನ ಮನೆಗಳು ಮಂಗಗಳ ಕಾಟಕ್ಕೆ ಹಾಳಾದ್ರೇ ಗಿಡ, ಮರ, ಹೂಬಳ್ಳಿ ಎಲ್ಲವೂ ಮಂಗಗಳ ಕಾಟಕ್ಕೆ ಬಲಿಯಾಗುತ್ತಿವೆ.

ವಿಶೇಷವಾಗಿ ಮಂಗಗಳ ಕಾದಾಟದ ಸಮಯ ಯಾವ ವ್ಯಕ್ತಿ, ಅಂಗಡಿ, ಮುಂಗಟ್ಟು ನೋಡದೆ ನುಗ್ಗಿ ಅಪಾಯ ಸೃಷ್ಟಿಸುತ್ತವೆ.

ಈ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಹಳ್ಳಿಗರು ಒತ್ತಾಯ ಮಾಡಿದ್ದಾರೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Vinayak Patil
Kshetra Samachara

Kshetra Samachara

13/11/2024 02:23 pm

Cinque Terre

10.91 K

Cinque Terre

1

ಸಂಬಂಧಿತ ಸುದ್ದಿ