ಪಬ್ಲಿಕ್ ನೆಕ್ಸ್ಟ್ ಫಾಲೋವಪ್ ವರದಿ-
ಹುಬ್ಬಳ್ಳಿ: ನೋಡ್ರಿ... ನೋಡ್ರಿ... ಇಲ್ಲೊಬ್ಬ ಪುಂಡ ಯಾರ ಭಯನೂ ಇಲ್ದಂಗ್, ಕುಸಗಲ್ ರೋಡ್ ನ್ಯಾಷನಲ್ ಹೈವೇ ಸರ್ವಿಸ್ ರೋಡ್‌ನ್ನು ಅತಿಕ್ರಮಿಸಿ ಮಾಡ್ಕೊಂಡು ಕಾಂಪೌಂಡ್ ಮತ್ ಹೋಟೆಲ್ ಕಟ್ಯಾನ್... ಇದರ ಬಗ್ಗೆ ನಿಮ್ಮ 'ಪಬ್ಲಿಕ್ ನೆಕ್ಸ್ಟ್' ನಿರಂತರ ಸುದ್ದಿ ಮಾಡ್ತಾ ಬಂದಿದೆ. ಹಿಂಗಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಮೇಡಂ ತನಿಖೆ ಮಾಡೋದಕ್ಕೆ ಸೂಚನೆ ನೀಡ್ಯಾರ ನೋಡ್ರಿ...
ಹೌದ್ ನೋಡ್ರಿ... ಮಹೇಶ ಬದ್ದಿ ಎಂಬಾತ ನ್ಯಾಷನಲ್ ಹೈವೇ ಸರ್ವಿಸ್ ರೋಡ್‌ನ್ನ ಅತಿಕ್ರಮಿಸಿ ಸುತ್ತಲೂ ಕಾಂಪೌಂಡ್ ಕಟ್ಗೊಂಡು, ಮಸ್ತಾಗಿ ಹೋಟೆಲ್ ಕೂಡ ಕಟ್ಯಾನ ನೋಡ್ರಿ.... ಇದರ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ದಾಗ ಸುದ್ದಿ ಮಾಡಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದ್ರೂ ಏನು ಪ್ರಯೋಜನ ಆಗಲಿಲ್ಲ ನೋಡ್ರಿ.... ಈ ನ್ಯಾಷನಲ್ ಹೈವೇ ಅಧಿಕಾರಿಗಳು ಎಷ್ಟ ಬೇಜವಾಬ್ದಾರಿತನ ಮಾಡ್ತಾರಂದ್ರ,, ಈ ವಿಷಯ ತಿಳಿದು ಎರಡು ತಿಂಗ್ಳಾದ್ರು ಒಟ್ಟ ಆ್ಯಕ್ಷನ್ ತಗೊತ್ತಿಲ್ಲ ನೋಡ್ರಿ... ಬರಿ ನೋಟಿಸ್ ಕೊಡೊದು ಸುಮ್ನ ಕುಂದ್ರೋದ್ ಮಾಡ್ತಾರ. ಅದರಾಗು ನ್ಯಾಷನಲ್ ಹೈವೇ AEE ಅಧಿಕಾರಿ ಎಚ್.ಬಿ ಗುಂಡಳ್ಳಿ ಸಾಹೇಬ್ರ ಎನಿ ಟೈಮ್ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿರ್ತಾರ ನೋಡ್ರಿ... ಆಫೀಸ್‌ಗೆ ಹೋದ್ರ ಚೇರ್ ಖಾಲಿ ಖಾಲಿ... ಇವರನ್ನ ಬಿಟ್ಟು ಹರೀಶ್ ಬಂಡಿವಡ್ಡರ್ ಸಾಹೇಬ್ರನ ಕೇಳಿದ್ರ, ಇನ್ನೂ ಸ್ವಲ್ಪ ಟೈಮ್ ಕೊಡ್ರಿ ನೋಡ್ತೇವಿ ಅಂತಾರ... ಸಮಸ್ಯೆ ಬಗೆ ಹರಿಸಬೇಕಾದ ಅಧಿಕಾರಿಗಳ ಹಿಂಗ್ ಅಂದ್ರ ಹೆಂಗ್... ಇವರನ್ನ ಬಿಟ್ಟ ಜಿಲ್ಲಾಧಿಕಾರಿ ದಿವ್ಯಪ್ರಭು ಮೇಡಂ ಅವರಿಗೆ ಹೋಗಿ ಕೇಳಿದ್ವಿ.. ಅವರು ಸೂಕ್ತ ತನಿಖೆ ಮಾಡಲು ಸೂಚನೆ ನೀಡ್ತೇವಿ ಅಂತಿದ್ದಾರೆ ನೋಡ್ರಿ..
ನೋಡ್ರಿ ನ್ಯಾಷನಲ್ ಹೈವೇ ಸರ್ವಿಸ್ ರೋಡ್ ಅತಿಕ್ರಮಿಸಿ ಹಿಂಗ್ ರಾಜಾರೋಷವಾಗಿ ಹೋಟೆಲ್, ಕಾಂಪೌಂಡ್ ಕಟ್ಯಾರ. ಇದನ್ ತೆರವುಗೊಳಿಸುವರೆಗೂ ನಾವ ಮಾತ್ರ ಸುದ್ದಿ ಮಾಡೋದ್ ಬಿಡಲ್ಲಾ ನೋಡ್ರಿ... ಅಧಿಕಾರಿಗಳು ಇದಕ್ಕ ಅಂತ್ಯ ಯಾವಾಗ ಹಾಕ್ತಾರ ನೋಡಬೇಕು.? ಈಗ ಜಿಲ್ಲಾಧಿಕಾರಿ ಮೇಡಂ ಸೂಚನೆ ನೀಡ್ಯಾರ್ ಈಗಾದ್ರು ತೆರವುಗೊಳಿಸ್ತಾರ ಎಂಬುದನ್ನ ಕಾಯ್ದು ನೋಡಬೇಕ ನೋಡ್ರಿ...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
12/11/2024 07:52 pm