ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಂಪತಿಯ ನಡುವೆ ಕಲಹ - ಗಂಡ, ಮಗನ ಮೇಲೆ ಹಲ್ಲೆ ನಡೆಸಿದ ಹೆಂಡತಿಯ ಗೆಳೆಯ

ಹುಬ್ಬಳ್ಳಿ: ಅದು ಸುಂದರ ಸಂಸಾರ 15 ವರ್ಷದ ದಾಂಪತ್ಯಕ್ಕೆ ಎರಡು ಮುದ್ದಾದ ಮಕ್ಕಳು. ಆದ್ರೆ ಆ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರ ನಡುವೆ ಇರುವ ಬಿರುಕು ಹೋಗಲಾಡಿಸಿ ಜೀವನವನ್ನು ಸಾಗಿಸೋಣ ಬಾ ಅಂದಿದ್ದಕ್ಕೆ ಇದೀಗ ಹೆಂಡತಿಗೆ ಕೋಪ ಬಂದಿದೆ. ಆಕೆ ತನ್ನ ಗೆಳೆಯನ ಜೊತೆ ಸೇರಿ ಗಂಡ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾಳೆ. ಪರಿಣಾಮ ತಂದೆ ಹಾಗೂ ಮಗ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹಾಗಾದ್ರೆ ಇವರಿಬ್ಬರ ನಡುವೆ ಆಗಿದ್ದು ಏನು ಏನಿವರ ಕಥೆ ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಈ ತಂದೆ, ಮಗನ ಹೆಸರು ರಾಕೇಶ ಹಾಗೂ ಅಭಿಷೇಕ ಅಂತ. ಹುಬ್ಬಳ್ಳಿಯ ಸೆಟ್ಲಿಮೆಂಟ್ ನಿವಾಸಿಗಳು. ರಾಕೇಶ್ ಕಳೆದ 15 ವರ್ಷದ ಹಿಂದೆ ಮಂಜುಳಾ ಎಂಬಾಕೆಯನ್ನು ವಿವಾಹ ಆಗಿದ್ದ. ಇಬ್ಬರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದ್ರೆ ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿದೆ. ಅದೇ ಸಮಯದಲ್ಲಿ ಎರಡು ತಿಂಗಳಗಳ ಕಾಲ ರಾಕೇಶ್ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಈ ಸಮಯದಲ್ಲಿ ರಾಕೇಶ್‌ನ ಹೆಂಡತಿ ಮಹೇಶ ಜಾಧವ್ ಎಂಬಾತನ ಜೊತೆ ಹೋಗಿದ್ದಾಳೆ. ಹೀಗಾಗಿ ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ಹೆಂಡತಿಗೆ ಬಾ ಅಂತಾ ಕರೆದರು ಕೂಡಾ ನಾನು ಬರಲ್ಲ ಅಂತಾ ಹೇಳಿದ್ದಾಳೆ. ಈ ವೇಳೆ ಗಂಡ ಹೆಂಡತಿ ನಡುವೆ ಜಗಳ ಆರಂಭವಾದಾಗ ಮಧ್ಯ ಪ್ರವೇಶ ಮಾಡಿದ ಮಂಜುಳಾಳ ಸ್ನೇಹಿತ ಮಹೇಶ್ ಹೆಲ್ಮೆಟ್‌ನಿಂದ ರಾಕೇಶ್ ಹಾಗೂ ಅಭಿಷೇಕ್ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಮಂಜುಳಾಳ ಗಂಡ ಆಸ್ಪತ್ರೆಯಲ್ಲಿ ಹೆಂಡತಿ ವಿರುದ್ಧ ಆರೋಪ ಮಾಡುತ್ತಿದ್ದಾನೆ.

ಗಲಾಟೆ ನಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ರಾಕೇಶ್‌ನ ಮಗ ಅಭಿಷೇಕನನ್ನು ಕೂಡಾ ಅವಾಚ್ಯವಾಗಿ ನಿಂದನೆ ಮಾಡಿ, ನೀನೇ ಏನೋ ರಮೇಶ್‌ನ ಮಗ ಅಂತ ಹೇಳಿ ಹೆಲ್ಮೆಟ್‌ನಿಂದ ಕಾಲು ಹಾಗೂ ಸೊಂಟಕ್ಕೆ ಹೊಡೆದಿದ್ದಾನೆ ಎಂದು ಹಲ್ಲೆಗೊಳಗಾದ ಅಭಿಷೇಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಒಟ್ಟಿನಲ್ಲಿ ಗಂಡ ಹೆಂಡತಿ ಜಗಳ ಎಲ್ಲ ಸಂಸಾರದಲ್ಲೂ ಕೂಡಾ ಇರತ್ತದೆ. ಆದ್ರೆ ನೀನು ಮಾಡಿದ್ದು ತಪ್ಪು ಆಗಿದ್ದರೂ ಅದನ್ನು ಮನ್ನಿಸಿ ನಿನ್ನ ಜೊತೆ ಜೀವನ ಮಾಡ್ತೀನಿ ಅಂತ ಗಂಡ ಅಂದ್ರು ಕೂಡಾ ಹೆಂಡತಿ ತನ್ನ ಗೆಳೆಯನ ಜೊತೆ ಸೇರಿ ಗಂಡ ಹಾಗೂ ಮಗ ಎನ್ನೋದು ಲೆಕ್ಕಿಸದೇ ಹೊಡೆದಿದ್ದು ಎಷ್ಟರ ಮಟ್ಟಿಗೆ ಸರಿ? ಈ ದಾಂಪತ್ಯ ಕಲಹ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

12/11/2024 10:53 pm

Cinque Terre

102.05 K

Cinque Terre

7

ಸಂಬಂಧಿತ ಸುದ್ದಿ