ಹುಬ್ಬಳ್ಳಿ: ಕ್ಯಾಂಟೀನ್ಗೆ ಬರುವ ಹುಡುಗಿಯರನ್ನು ಯಾಕೆ ಚುಡಾಯಿಸುತ್ತಿಯಾ ಎಂದು ಪ್ರಶ್ನಿಸಿದ್ದಕ್ಕೆ ಯುವಕನೊಬ್ಬನ ಮೇಲೆ 6 ಜನ ಸೇರಿಕೊಂಡು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾ ಬಜಾರ್ ಬಳಿಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಹೋಟೆಲ್ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೋಪ್ಪಿಕರ್ ರಸ್ತೆಯಲ್ಲಿರುವ ಸೆಟ್ಲೈಟ್ ಕಾಂಪ್ಲೆಕ್ಸ್'ನಲ್ಲಿ ಕೆಫೆ ನಡೆಸುತ್ತಿದ್ದ ಸಯ್ಯಮ್ ಎಂಬಾತನೇ ಹಲ್ಲೆಗೊಳಗಾದವ. ಈತ ನಡೆಸುತ್ತಿದ್ದ ಕೆಫೆಗೆ ಬರುವ ಹುಡುಗಿರನ್ನು ಧಾರವಾಡದ ಕೆಲವು ಯುವಕರು ಚುಡಾಯಿಸುತ್ತಿದ್ದರು. ಹೀಗಾಗಿ ಸಯ್ಯಮ್ ಹುಡುಗಿರನ್ನು ಚುಡಾಯಿಸಬೇಡಿ ಎಂದು ಹಲವು ಬಾರಿ ಹೇಳಿದ್ದಾನೆ. ಆದರೂ ಹುಡುಗರು ಈತನ ಮಾತಿಗೆ ಕ್ಯಾರೇ ಎಂದಿಲ್ಲ.
ನಿನ್ನೇ ಕೂಡಾ ಕೆಫೆ ಬಳಿಯಲ್ಲಿ ಬಂದಿದ್ದ ಈ ಯುವಕರು ಮತ್ತೇ ಹುಡುಗಿಯರನ್ನು ಚುಡಾಯಿಸಿದ್ದಾರೆ. ಆಗ ಸಯ್ಯಮ್ ನಿಮಗೆ ಎಷ್ಟು ಬಾರಿ ಹೇಳಬೇಕು ಹುಡುಗಿಯರನ್ನು ಚುಡಾಯಿಸಬೇಡಿ ಅಂತ ಯುವಕರ ಜೊತೆ ವಾಗ್ವಾದ್ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕರು ರಾತ್ರಿ 9 ಗಂಟೆಯ ಸುಮಾರಿಗೆ ಶಾ ಬಜಾರ್ ಬಳಿಯಲ್ಲಿನ ಝಮ್ ಝಮ್ ಹೋಟೆಲ್ ಮುಂಭಾಗದಲ್ಲಿ ಸಯ್ಯಮ್ ಮೇಲೆ ಕಲ್ಲು ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಅಂತ ಸಯ್ಯಮ್ ಇದೀಗ ಘಂಟಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಸದ್ಯ ಘಂಟಿಕೇರಿ ಠಾಣೆಯ ಇನ್ಸ್ಪೆಕ್ಟರ್ ಜಾಧವ್ ಕೊಲೆ ಯತ್ನದ ಪ್ರಕರಣ ದಾಖಲು ಮಾಡಿ ಸಯ್ಯಮ್ ಮೇಲೆ ಹಲ್ಲೆ ನಡೆಸಿದ 6 ಜನರ ಪೈಕಿ ಮೂವರನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು,ಇನ್ನುಳಿದ ಮೂವರ ಪತ್ತೆಗೆ ಜಾಲವನ್ನು ಬಿಸಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/11/2024 02:29 pm