ಕುಂದಗೋಳ : ಭಾರತೀಯ ಸರ್ವೋಚ್ಚ ನ್ಯಾಯಾಲಯವು ಡಿಸೆಂಬರ್ 5. 1995 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಜಾರಿಗೆ ತಂದಿದೆ. ಇದರ ಉದ್ದೇಶ ಸರ್ವರಿಗೂ ಕಾನೂನು ಸೇವೆ ಒದಗಿಸುವುದಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.
ಅವರು ಕುಂದಗೋಳ ಪಟ್ಟಣದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 'ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನೂ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ 'ಮೊದಲು ನ್ಯಾಯಾಲಯಕ್ಕೆ ಬರಲು, ತಮ್ಮ ವಿವಾದ ಹೇಳಿಕೊಳ್ಳಲು ಜನರಿಗೆ ಜಾಗೃತಿ ಇರಲಿಲ್ಲ. ಶ್ರೀಮಂತರಿಗೆ ಮಾತ್ರ ನ್ಯಾಯಾಲಯ ಎಂಬ ಮಾತು ಇತ್ತು. ಈ ಬಗ್ಗೆ ಜನರಿಗೆ ಸೂಕ್ತ ಅರಿವು ಮೂಡಿಸಲು ಈ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಜಾರಿಯಾಯಿತು ಎಂದರು.
ಬಳಿಕ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ಮಾತನಾಡಿ ಜನರು ಆರ್ಥಿಕವಾಗಿ ಸದೃಢ ಇದ್ದವರು ಮಾತ್ರ ನ್ಯಾಯಾಲಯದ ಮೆಟ್ಟಿಲು ಏರಬೇಕು, ಆರ್ಥಿಕವಾಗಿ ಹಿಂದುಳಿದವರು ಅಲ್ಲಾ ಎಂಬ ಮನಸ್ಥಿತಿಯಿಂದ ಹೊರತರುವ ಕಾರ್ಯಕ್ರಮವೇ ಈ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದರ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಟಿ.ಎಸ್.ಗೌಡಪ್ಪಗೌಡನವರು ವಹಿಸಿದ್ದರು, ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ಪಾಟೀಲ್, ಕಾರ್ಯದರ್ಶಿ ವಾಯ್.ಬಿ.ಬಿಳೇಬಾಳ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಕಲಾ ಪ್ರಭಾಕರ, ಗೀತಾ, ಜಿ, ಶಿಕ್ಷಣ ಸಂಸ್ಥೆ ಚೇರ್ಮನ್ ಎ.ಎಮ್.ಕಟಗಿ, ಮುಖ್ಯೋಪಾಧ್ಯಾಯರಾದ ಎಸ್.ಎನ್.ಬರದೇಲಿ, ಉಪನ್ಯಾಸಕರಾದ ಅಶ್ವಿನಿ ಕ್ಯಾರಕಟ್ಟಿ, ಎನ್.ಬಿ.ಹಂಚಾಟಿ, ಉಪಸ್ಥಿತರಿದ್ದರು.
Kshetra Samachara
09/11/2024 04:52 pm