ಧಾರವಾಡ: ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಇಕ್ಬಾಲ್ ತಮಟಗಾರ ಹಾಗೂ ಅವರ ಸಹಚರರಾದ ಅಮೀರ್, ಅಜಮರ್ ಮುಲ್ಲಾ ಎಂಬುವವರು ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಧಾರವಾಡದ ಐಸ್ ಗೇಟ್ ಬಳಿ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಪೊಲೀಸ್ ಪೇದೆ ಬಸವರಾಜ ಕಮತರ ಎಂಬುವವರೊಂದಿಗೆ ಕಿರಿಕ್ ಮಾಡಿದ ಇಕ್ಬಾಲ್ ಹಾಗೂ ಆತನ ಸಹಚರರು, ಪೊಲೀಸ್ ಪೇದೆಯೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಬ್ಲೇಡ್ನಿಂದ ಮುಖದ ನಾಲ್ಕು ಕಡೆಗಳಲ್ಲಿ ಹಲ್ಲೆ ನಡೆಸಿದ್ದಾರೆ.
ಡಿಎಆರ್ ಪೊಲೀಸ್ ಆಗಿರುವ ಬಸವರಾಜ ಅವರ ಮೇಲೆ ಬ್ಲೇಡ್ನಿಂದ ಹಲ್ಲೆ ನಡೆಸಿರುವ ಮೂರು ಆರೋಪಿಗಳ ಮೇಲೆ ಇದೀಗ ಧಾರವಾಡ ಉಪನಗರ ಠಾಣೆಯಲ್ಲಿ 307 ಅಡಿ ದೂರು ದಾಖಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/11/2024 03:25 pm