ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯಾವಾಗ ತಪ್ಪುತ್ತೆ ಬಿಡಾಡಿ ದನಗಳ ತಾಪತ್ರಯ?

ಧಾರವಾಡ: ಇತ್ತೀಚೆಗಷ್ಟೇ ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಬಿಡಾಡಿ ದನಗಳ ಅಡ್ಡ ಬಂದ ಪರಿಣಾಮ ಲಾರಿ ಮತ್ತು ಆಟೊ ಮಧ್ಯೆ ಡಿಕ್ಕಿಯಾಗಿ ಆಟೋದಲ್ಲಿದ್ದ ಮೂವರು ಸಾವನ್ನಪ್ಪಿದ್ದರು. ಇದಾದ ಬಳಿಕ ಕೆಲಗೇರಿಯ ನಿವಾಸಿಗಳು ಬಿಡಾಡಿ ದನಗಳನ್ನು ರಸ್ತೆಯಲ್ಲಿ ಬಿಡದಂತೆ ಕ್ರಮ ವಹಿಸಲು ಪಾಲಿಕೆ ವಿರುದ್ಧ ನಡು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದರು.

ಕೆಲಗೇರಿ ನಿವಾಸಿಗಳು ಪ್ರತಿಭಟನೆ ನಡೆಸಿದರೂ ಪಾಲಿಕೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಬಿಡಾಡಿ ದನಗಳು ಧಾರವಾಡದ ಅನೇಕ ರಸ್ತೆಗಳಲ್ಲಿ ಬೀಡು ಬಿಟ್ಟಿವೆ. ರಾತ್ರಿ ಸಮಯದಲ್ಲಿ ಈ ದನಗಳು ರಸ್ತೆಯಲ್ಲೇ ನಿಲ್ಲುವುದರಿಂದ ಅನೇಕ ಬೈಕ್ ಸವಾರರು ಹಾಗೂ ಇತರ ವಾಹನ ಸವಾರರು ಅವುಗಳಿಗೆ ಡಿಕ್ಕಿ ಹೊಡೆದು ಅವುಗಳನ್ನೂ ಗಾಯಗೊಳಿಸಿ ತಾವೂ ಸಹ ಗಾಯಗೊಂಡಿದ್ದಾರೆ.

ಈ ಬಿಡಾಡಿ ದನಗಳಿಗೆ ಕೆಲ ಮಾಲೀಕರೂ ಇದ್ದಾರೆ. ಅಂತಹ ದನಗಳು ಹಗಲೆಲ್ಲ ಮಾರುಕಟ್ಟೆ ಸೇರಿದಂತೆ ಇತರ ಕಡೆ ಮೇಯ್ದು ಮರಳಿ ಮನೆ ಕಡೆ ಹೋಗುತ್ತವೆ. ಆದರೆ, ಮಾಲೀಕರೇ ಇಲ್ಲದ ಜಾನುವಾರುಗಳು ನಡು ರಸ್ತೆಯಲ್ಲೇ ಮಲಗಿಕೊಳ್ಳುವುದರಿಂದ ಸಂಚಾರ ದಟ್ಟನೆ ಹಾಗೂ ಅಪಘಾತದಂತಹ ಘಟನೆಗಳು ಸಂಭವಿಸುತ್ತಿವೆ. ಹೀಗಾಗಿ ಬಿಡಾಡಿ ದನಗಳನ್ನು ಗೋಶಾಲೆಗಾದರೂ ಸೇರಿಸಬೇಕು ಅಥವಾ ಬೇರೊಂದು ವ್ಯವಸ್ಥೆಯನ್ನಾದರೂ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಧಾರವಾಡದ ಸುಭಾಷ ರಸ್ತೆ, ಮಾರುಕಟ್ಟೆ, ಸಂಗಮ ವೃತ್ತ, ಶಿವಾಜಿ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಡಾಡಿ ದನಗಳ ಹಿಂಡುಗಟ್ಟಲೇ ನಿಂತಿರುತ್ತವೆ. ಇಂತಹ ಬಿಡಾಡಿ ದನಗಳನ್ನು ರಸ್ತೆಯಲ್ಲಿ ಬಿಡಬಾರದು ಎಂಬ ಒತ್ತಾಯ ಕೇಳಿ ಬಂದಿದ್ದು, ಪಾಲಿಕೆ ಮುಂದಿನ ದಿನಗಳಲ್ಲಿ ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/11/2024 04:31 pm

Cinque Terre

48.06 K

Cinque Terre

9

ಸಂಬಂಧಿತ ಸುದ್ದಿ