ಕುಂದಗೋಳ : ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ನೆನಪಿನಲ್ಲಿ ನಿರ್ಮಿಸಿದ ಸ್ಮಾರಕ ಭವನದ ಅವ್ಯವಸ್ಥೆ ಮೇಲ್ನೋಟಕ್ಕೆ ತೇಪೆ ಎಳೆಯುವ ಕೆಲಸವನ್ನು ಪಟ್ಟಣ ಪಂಚಾಯಿತಿ ಕೈಗೊಂಡು ಪುನಃ ಸಂಪೂರ್ಣ ಸ್ವಚ್ಛತೆ ಮರೀಚಿಕೆ ಮಾಡಿದೆ.
ಕಳೆದ ಶನಿವಾರ ಪಬ್ಲಿಕ್ ನೆಕ್ಸ್ಟ್ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಕಲುಷಿತ ನೀರು ಸಂಗ್ರಹವಾಗಿ ಮತ್ತು ಕಸ ಕಡ್ಡಿ ತುಂಬಿ ಅನೈರ್ಮಲ್ಯ ಉಂಟಾದ ದುಸ್ಥಿತಿ, ಸಿಸಿ ಕ್ಯಾಮೆರಾ, ರಾತ್ರಿ ಬೆಳಕಿನ ವ್ಯವಸ್ಥೆ, ಸೇರಿದಂತೆ ಸ್ಮಾರಕ ಭವನ ಕುಡುಕರ ಅಡ್ಡೆಯಾಗಿ ಏರ್ಪಟ್ಟ ಬಗ್ಗೆ ವರದಿ ಬಿತ್ತರಿಸಿತ್ತು.
ಈ ವರದಿ ಆಲಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೇಲ್ನೋಟಕ್ಕೆ ಸವಾಯಿ ಗಂಧರ್ವರ ಸ್ಮಾರಕ ಭವನದ ಸುತ್ತ ಸಂಗ್ರಹವಾದ ಕಸವನ್ನು ಮಾತ್ರ ವಿಲೇವಾರಿ ಮಾಡಿದೆ ಹೊರತು, ಕಟ್ಟಡದಲ್ಲಿ ಸಂಗ್ರಹವಾದ ಕಲುಷಿತ ನೀರು, ಸಿಸಿ ಕ್ಯಾಮೆರಾ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಸೇರಿದಂತೆ ಕಟ್ಟಡಕ್ಕೆ ಭದ್ರತೆ ನೀಡುವ ಕೆಲಸದಲ್ಲಿ ಮೌನ ತಾಳಿದೆ.
ಪ್ರಸ್ತುತ ಪಬ್ಲಿಕ್ ನೆಕ್ಸ್ಟ್ ಸವಾಯಿ ಗಂಧರ್ವರ ಸ್ಮಾರಕ ಭವನದ ಅವ್ಯವಸ್ಥೆ ಬಗ್ಗೆ ಫಾಲೋ ಅಪ್ ಬೆನ್ನು ಬಿದ್ದ ಬಳಿಕ 15 ದಿನಗಳಲ್ಲಿ ಸ್ಮಾರಕ ಭವನ ಸ್ವಚ್ಛತೆ ಮಾಡುವ ಭರವಸೆಯನ್ನು ಪಟ್ಟಣ ಪಂಚಾಯಿತಿ ನೀಡಿದೆ.
ಇದೀಗ 15 ದಿನಗಳ ನಂತರದಲ್ಲಿ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕ ಭವನ ಸ್ವಚ್ಛತೆ ಆಗುತ್ತಾ ಕಾದು ನೋಡಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್,
Kshetra Samachara
12/11/2024 03:44 pm