ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ - ಕೆರೆ ತುಂಬಿದರು ಪಟ್ಟಣದಲ್ಲಿ ಕುಡಿಯಲು ನೀರಿಲ್ಲ

ಕಲಘಟಗಿ : ಈ ಬಾರಿ ಸತತ ಮಳೆ ಇಂದಾಗಿ ಕೆರೆ ಕಟ್ಟೆಗಳು ತುಂಬಿ ಜಿಲ್ಲೆಯಲ್ಲಿ ಕುಡಿಯುವುದಕ್ಕೆ ನೀರಿನ ಕೊರತೆ ಇಲ್ಲದಂತಾಗಿದೆ. ಆದರೆ ಕಲಘಟಗಿ ಪಟ್ಟಣದಲ್ಲಿ ಮಾತ್ರ ಕೆರೆ ತುಂಬಿದರು ಪಟ್ಟಣದ ನಿವಾಸಿಗಳಿಗೆ ಕುಡಿಯಲು ನೀರು ಮಾತ್ರ ಎಂಟು ದಿನಕೊಮ್ಮೆ ಬಿಡುವಂತಾಗಿದೆ.

ಕಲಘಟಗಿ ಪಟ್ಟಣಕ್ಕೆ ತುಮರಿಕೊಪ್ಪ ಗ್ರಾಮದ ಬಳಿ ಇರುವ ಬೇಣಚಿ ಕೆರೆ ನೀರು ಸರಬರಾಜು ಮಾಡಲಾಗುತ್ತದೆ.ಈ ಭಾರಿ ಮಳೆ ಇಂದಾಗಿ ಕೆರೆ ಸಂಪೂರ್ಣ ತುಂಬಿ ವರ್ಷ್ ವಿಡಿ ಕುಡಿಯುವ ನೀರಿನ ಸಮಸ್ಯ ಇಲ್ಲದಂತಾಗಿದೆ.

ಆದರೆ ವಿಪರ್ಯಾಸ ಅಂದರೆ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವ ಸ್ಥಿತಿ ಇಲ್ಲಿ ಬಂದೋದಗಿದೆ. ಕಾರಣ ಪಟ್ಟಣಕ್ಕೆ ನಾಲ್ಕು ದಿನಕ್ಕೆ ಬಿಡಬೇಕಾದ ನೀರು ಈಗ ಎಂಟು ದಿನಕೊಮ್ಮೆ ಬಿಡುತ್ತಿದ್ದಾರೆ ಎಂದು ಪಟ್ಟಣದ ನಿವಾಸಿಗಳು ತಿಳಿಸುತ್ತಿದ್ದಾರೆ.

ಇಲ್ಲಿಯ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಇದಕ್ಕೆ ಕಾರಣ ಕೇಳಿದರೆ ನೀರು ಎತ್ತುವ ಯಂತ್ರ ಕಡಿಮೆ ಮಟ್ಟದ್ದಾಗಿದ್ದು ಅಷ್ಟೆ ಅಲ್ಲದೆ ಯಂತ್ರಕ್ಕೆ ಬೇಕಾಗುವಷ್ಟು ವಿದ್ಯುತ್ ನೀಡುತ್ತಿಲ್ಲ ಎಂದು ಇಲ್ಲಿಯ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳಾಗಲಿ ಹಾಗೂ ಪಟ್ಟಣಪಂಚಾಯತ್ ಸದಸ್ಯರುಗಳಾಗಲಿ ಗಮನ ಹರಿಸುತ್ತಿಲ್ಲ ಕೂಡಲೇ ಇಲ್ಲಿಯ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಇತ್ತಕಡೆ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕೆಂದು ಪಟ್ಟಣದ ನಿವಾಸಿಗಳು ತಿಳಿಸಿದ್ದಾರೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/11/2024 04:29 pm

Cinque Terre

49.27 K

Cinque Terre

1

ಸಂಬಂಧಿತ ಸುದ್ದಿ