ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸರ್ಕಾರಿ ಕಚೇರಿಯಲ್ಲಿ ಸಂಗ್ರಹವಾದ ನೀರು - ಶೀಘ್ರವೇ ಖಾಲಿ

ಕುಂದಗೋಳ: ವಾರ್ಷಿಕ 50 ಲಕ್ಷಕ್ಕೂ ಅಧಿಕ ಅಧಿಕ ನಿರ್ವಹಣೆ ವೆಚ್ಚ ಪಡೆದು ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಸಂಗ್ರಹವಾದ ಕಲುಷಿತ ನೀರನ್ನು ತೆರವು ಮಾಡದೆ ಸುಮ್ಮನಿದ್ದ ತಾಲೂಕು ಪಂಚಾಯಿತಿ ಇದೀಗ ನೀರು ಹೊರ ಹಾಕಲು ಅಸ್ತು ಎಂದಿದೆ.

ಕುಂದಗೋಳ ಪಟ್ಟಣದಲ್ಲಿ 7 ಕೋಟಿ 64 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡವನ್ನೂ 2019-20 ರಿಂದ ನಿರ್ವಹಣೆ ಮಾಡುತ್ತಿರುವ ತಾಲೂಕು ಪಂಚಾಯಿತಿ 5 ಇಲಾಖೆಗಳಿಂದ ಮಾಸಿಕ ನಿರ್ವಹಣೆ ವೆಚ್ಚ ಪಡೆಯುತ್ತಿದೆ. ಆದರೆ, ಪ್ರಸ್ತುತ ವರ್ಷ ಅತಿವೃಷ್ಟಿ ಪರಿಣಾಮ ಕಟ್ಟಡದಲ್ಲಿ ಕಲುಷಿತಗೊಂಡ ನೀರು ಸಂಗ್ರಹವಾಗಿದ್ದು, ಶೀಘ್ರವೇ ನೀರು ಹೊರ ಹಾಕಲು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಸಂಗ್ರಹವಾದ ನೀರು ತೆರವಾದಲ್ಲಿ ಕಟ್ಟಡದಲ್ಲಿ ತಲೆದೋರಿದ ದುರ್ವಾಸನೆ, ಸೊಳ್ಳೆಗಳ ಕಾಟ, ಅನೈರ್ಮಲ್ಯ ಕಡಿಮೆ ಆಗಲಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

12/11/2024 09:50 pm

Cinque Terre

13.93 K

Cinque Terre

1

ಸಂಬಂಧಿತ ಸುದ್ದಿ