ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಮಂದಿಗೆ ಅಸ್ತಮಾ ಗಿಫ್ಟ್ ಕೊಟ್ಟ ಕಮಿಷನರ್ ಈಶ್ವರ್ ಉಳ್ಳಾಗಡ್ಡಿಗೆ ಟ್ರೀಟ್ಮೆಂಟ್ ಕೊಡ್ತಾರಾ MLA ಅಬ್ಬಯ್ಯ ಸಾಹೇಬ್ರ..?

ಹುಬ್ಬಳ್ಳಿ: ನಮ್ಮ ಹುಬ್ಬಳ್ಳ್ಯಾಗ್ ಅಧಿಕಾರಿಗಳ ಎಷ್ಟ್ ಚೆಂದ್ ಕೆಲ್ಸಾ ಮಾಡ್ತಾರಾ ಅಂದ್ರ ಅವರ ಮಾಡುವ ಕೆಲಸಾ ನೋಡಾಕ್ ಎರಡು ಕಣ್ಣ ಸಾಲುದಿಲ್ಲ. ಇದರ ಜೊತಿ ಇಲ್ಲಿನ ಜನಪ್ರತಿನಿಧಿಗಳ ಅಭಿವೃದ್ಧಿ ಕೆಲ್ಸಾ ಮಾಡುಸುದ ನೋಡಿದ್ರ ಇವರನಾ ಹೋಗಳಾಕ ಒಂದ ಬಾಯ ಸಾಲುದಿಲ್ಲ. ಹೀಂಗಾಗಿ ಈ ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಅಂತಾ ಅವಾರ್ಡ್ ಕೂಡಾ ಕೊಟ್ಟಾರಂತ್. ಅದೇನ ನೋಡಿ ಕೊಟ್ಟಾರೋ ಅನ್ನುದ್ ಅಂತೂ ನಮಗ ತಿಳಿದಂಗ್ ಆಗೇತಿ ನೋಡ್ರಿ... ಏ ಏನ ಹೇಳಾಕುಂತೀರಿ ಚೆಂದಗ್ ಬಿಡಿಸಿ ಹೇಳ್ರಿಪಾ ಅಂತೀರ ಹೌದಿಲ್ಲೊ ಹೇಳೋದೇನ್ ತೋರಿಸೆ ಬಿಡ್ತೀವಿ ನೋಡ್ರಿ.

ಈ ಹುಬ್ಬಳ್ಳಿ ಗಬ್ಬುರ್ ಕಮಾನ್ ಸರ್ಕಲ್‌ದಿಂದ ಬಿಡ್ನಾಳ ಸರ್ಕಲ್ ಮಟಾ ರೋಡ್ ಅನ್ನುದ್ ಹದಿಗೆಟ್ಟ ಹೊಗೇತಿ. ಇಲ್ಲೆನರ್ ಒಂದ ವಾರ್ ಬೈಕ್ ನ್ಯಾಗ್ ಒಡ್ಯಾಡಿದ್ರ ನೂರಕ್ಕ ನೂರರಸ್ಟ್ ಅಸ್ತಮಾ ಬಂದ ಹುಂಟ್ ಹುಂಟ್ಲೆ ಹೊಗಿ ಹಾಕಿಸ್ಕೊಳೋದು ಗ್ಯಾರಂಟಿ ನೋಡ್ರಿ. ನಾವ್ ಒಂದ ದಿನದ ಹಿಂದ ಈ ರೋಡಿನ್ ಸುದ್ದಿ ಮಾಡಿದ್ರು ಇವರ್ ತಿರುಗಿ ನೋಡಿಲ್ಲ. ಯಾಕ್ ಅಂದ್ರ ಇವರೇನ್ ಈ ರೋಡ್ ನ್ಯಾಗ್ ಬೈಕ್ ನ್ಯಾಗ್ ಓಡಾಡುದಿಲ್ಲ, ಒಂದ ವೇಳೆ ಒಡ್ಯಾಡಿದ್ರು ಕಾರ್ ನ್ಯಾಗ್ ಎಸಿ ಹಾಕೊಂಡ್ ಜುಮ್ ಅಂತಾ ಹೋಗ್ತಾರ್ ಹೀಂಗಾಗಿ ಇವರಿಗೆ ಏನ್ ಸುಡಗಾಡ್ ಅಕ್ಕೆತಿ ಹೇಳ್ರಿ.

ಈ ಭಾಗದ ಶಾಸಕ ಪ್ರಸಾದ್ ಅಬ್ಬಯ್ಯ ಸಾಹೇಬ್ರು ಸ್ವಲ್ಪ್ ನೀವಾದ್ರು ಕಣ್ಣ ಬಿಟ್ಟ ಇತ್ತಾಗ್ ನೋಡ್ರಿ, ಆರಾಮಾಗಿ ಹಾಸ್ಕೊಂಡ್ ಮಲಗ್ಯಾರ್ ಅಲ್ಲ ಕಾರ್ಪೊರೇಷನ್ ಕಮಿಷನರ್ ಈಶ್ವರ್ ಉಳ್ಳಾಗಡ್ಡಿಗೆ ಮತ್ತ PWDಯವರಿಗೆ ಚೆಂದ್ಗ ಹುಬ್ಬಳ್ಳಿ ಬಾಸ್ಯಗ್ ಸ್ವಲ್ಪ್ ಉಗದ್ ಹೇಳ್ರಿ ಯಾಕಂದ್ರ ಇವರೇನು ಇಲ್ಲಿ ಕೆಲ್ಸಾ ಮಾಡಕ್ ಬಂದಾಗ ಕಾಣಸ್ವಲ್ತ್, ನೋಡುನ್ ಈಗ ನಿಮ್ಮ ಗಮನಕ್ಕ್ ಈ ವಿಚಾರ ತಂದೇವಿ MLA ಅಬ್ಬಯ್ಯ ಸಾಹೇಬ್ರ ಕೆಲ್ಸಾ ಮಾಡಿಸ್ತಿರೋ ಇಲ್ಲಾ ನಾವ್ ಮಂದಿ ಕಡೆ ಪಟ್ಟಿ ಹಾಕಿಸಿ ಈ ರೋಡ್ ಕೆಲ್ಸಾ ಮಾಡಿಸೋನ್ ನೀವ್ ತೀರ್ಮಾನ ಮಾಡ್ರಿ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/11/2024 10:35 pm

Cinque Terre

124.56 K

Cinque Terre

29

ಸಂಬಂಧಿತ ಸುದ್ದಿ