ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಾನ ಸ್ತಂಭ ಪ್ರತಿಷ್ಠಾಪನೆ- "ತೀರ್ಥಂಕರರು ಬೋಧಿಸಿದ ಮಾರ್ಗದಲ್ಲಿ ನಡೆಯೋಣ"

ಕುಂದಗೋಳ: ಜೈನ ಮಂದಿರ ಮುಂದೆ ಮಾನ ಸ್ತಂಭ ನಿರ್ಮಾಣ ಮಾಡುವ ಉದ್ದೇಶ ಮಾನ ಕಷಾಯದಿಂದ ಮುಕ್ತಗೊಂಡು, ಜೈನಬಿಂಬದ ದರ್ಶನ ಪಡೆದಾಗ ಮಾತ್ರ ಆತ್ಮ ಶುದ್ಧಗೊಳ್ಳುತ್ತದೆ ಎಂದು ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಹೇಳಿದರು.

ಅವರು ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ 1008 ಶ್ರೀ ಶಾಂತಿನಾಥ ತೀರ್ಥಂಕರ ಜೈನ ಮಂದಿರ ನಿರ್ಮಾಣದ ಅಂಗವಾಗಿ ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗುಡಗೇರಿ ಸುತ್ತಮುತ್ತಲು 72 ಜೈನ ಮಂದಿರಗಳಿದ್ದು, ಇಂದು ನಶಿಸಿ ಹೋಗಿವೆ. ಜೈನ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಸಂತಸವಾಗಿದೆ. ನಾನು ಎಂಬ ಅಹಂ ತೊರೆದಾಗ ಮಾತ್ರ ಆತ್ಮ ಶುದ್ಧಗೊಳ್ಳುತ್ತದೆ. ಪ್ರತಿಯೊಬ್ಬರೂ ಧರ್ಮವನ್ನು ರಕ್ಷಿಸಿ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಈ ಜೈನ ಮಂದಿರದ ಪಂಚ ಕಲ್ಯಾಣ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸೋಣ ಎಂದು ಹೇಳಿದರು.

ಕೊಲ್ಲಾಪುರದ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಪುಣ್ಯ- ಪಾಪಗಳ ಬಗ್ಗೆ ಅರಿತಾಗ ಮಾತ್ರ ಈ ಜೀವನ ಸನ್ಮಾರ್ಗದಲ್ಲಿ ಸಾಗುತ್ತದೆ. ಪ್ರತಿನಿತ್ಯವೂ ಅರಿತೋ ಅರಿಯದೆಯೋ ಪಾಪಕರ್ಮಗಳನ್ನು ಬಂಧನ ಮಾಡಿಕೊಳ್ಳುತ್ತೇವೆ. ಪುಣ್ಯ ಕಾರ್ಯದ ಕಡೆಗೆ ಸಾಗಿ ತೀರ್ಥಂಕರರು ಬೋಧಿಸಿದ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.

ಪ್ರಾತಃಕಾಲ ಚೌವಿಸ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕದೊಂದಿಗೆ ಮಾನಸ್ತಂಭ ಪ್ರತಿಷ್ಠಾಪನೆಯ ವಿಧಿ ವಿಧಾನ ಉಭಯ ಶ್ರೀಗಳ ಮಾರ್ಗದರ್ಶನದಲ್ಲಿ ನೆರವೇರಿತು. ಮಾನಸ್ತಂಭದ ದಾನಿಗಳಾದ ಸುಭಾಷ್ ಅಕ್ಕಿ ಹಾಗೂ ಪರಿವಾರದವರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ದಯಾನಂದ ಕುಂದುರ, ಮುಖಂಡರಾದ ರಾಮಚಂದ್ರ ಮುರಗಿ, ಎಂ.ಟಿ.ಅಕ್ಕಿ, ಭರತೇಶ ಸೋಮಾಪುರ, ಶೀತಲ ಮುರಗಿ, ಪಿ.ಜಿ.ಅಕ್ಕಿ, ದಯಾನಂದ ಪಾಟೀಲ, ಬಾಬು ಸೋಮಪುರ, ಶ್ರೀಪಾಲ ಚಿವಟೆ, ಪ್ರಮೋದ ದುಂಡಸಿ, ಪದ್ಮರಾಜ ಕುಂದೂರು, ಗೊಮ್ಮಟೇಶ ಅಂಗಡಿ, ಧರಣೇಂದ್ರ ಅಕ್ಕಿ, ಧರ್ಮಣ್ಣ ಮುರುಗಿ ಸೇರಿದಂತ್ತೆ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು.

Edited By : Somashekar
Kshetra Samachara

Kshetra Samachara

09/11/2024 05:57 pm

Cinque Terre

17.22 K

Cinque Terre

2

ಸಂಬಂಧಿತ ಸುದ್ದಿ