ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸಾ ಬಂಡೂರಿ ನಾಲಾ ಯೋಜನೆ : ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಳಸಾ ಬಂಡೂರಿ ನಾಲಾ ಯೋಜನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗಾಗಿ ಪತ್ರ ಬರೆದಿದ್ದಾರೆ.

ಪಿಎಂಗೆ ಬರೆದ ಪತ್ರದಲ್ಲಿ ಪ್ರಧಾನಿ ಜನ್ಮದಿನಕ್ಕೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಸಿಎಂ. ಪತ್ರದ ಸಾರಾಂಶ ಹೀಗೆ ಇದೆ ,ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನಾನು ಬರೆಯುತ್ತಿದ್ದೇನೆ, ಉತ್ತರ ಕರ್ನಾಟಕದ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ನಿರ್ಣಾಯಕವಾಗಿರುವ ಕಳಸಾ-ಬಂಧೂರಿ ನಾಲಾ ತಿರುವು ಯೋಜನೆಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF&CC) ವನ್ಯಜೀವಿ ಕ್ಲಿಯರೆನ್ಸ್‌ಗಾಗಿ ದೀರ್ಘಕಾಲದವರೆಗೆ ಬಾಕಿ ಉಳಿದಿದೆ.

ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ,ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ).

ರಾಜ್ಯ ಸರ್ಕಾರವು 16-06-2022 ರಂದು CWC ಗೆ ಕಳಸಾ ಮತ್ತು ಬಂಧೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಕ್ಲಿಯರೆನ್ಸ್‌ಗಾಗಿ ಸಲ್ಲಿಸಿದೆ.

ಪರಿವೇಶ್ ಪೋರ್ಟಲ್ ಸಂಖ್ಯೆ: WL/KA/DRKWATER/431333/ 2023 ಹೊಂದಿರುವ ಪ್ರಸ್ತಾವನೆಯು ಎಲ್ಲಾ ಅಗತ್ಯ ಪೂರ್ವಾಪೇಕ್ಷಿತಗಳನ್ನು ಪೂರೈಸಿದೆ ಮತ್ತು ವಿವರವಾದ ಸಮರ್ಥನೆಗಳನ್ನು ಒದಗಿಸಿದೆ ಆದಾಗ್ಯೂ ಇಲ್ಲಿಯವರೆಗೆ ನೀವು ಅಧ್ಯಕ್ಷರಾಗಿರುವ ವನ್ಯಜೀವಿ ರಾಷ್ಟ್ರೀಯ ಮಂಡಳಿಯು ಅಗತ್ಯ ಅನುಮತಿಯನ್ನು ನೀಡಿಲ್ಲ.

ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಅವರು ಕಳಸಾ ಬಂಡೂರಿಯಲ್ಲಿ ಕರ್ನಾಟಕ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದಂತೆ ಕಾನೂನುಬಾಹಿರ ಆದೇಶವನ್ನು ಹೊರಡಿಸಿದ್ದಾರೆ.

ಮಹದಾಯಿ ಯೋಜನೆಗೆ ಸುಪ್ರೀಂ ಅನುಮತಿ ನೀಡಿದೆ.ಆದರೆ ವನ್ಯಜೀವಿ ಮಂಡಳಿಯ ಅನುಮತಿ ಸಿಕ್ಕಿಲ್ಲ.ರಾಜ್ಯ ಸರ್ಕಾರ ಅನುಮತಿ ಕೋರಿ ಮನವಿ ಮಾಡಿತ್ತು.ಆದರೆ ನಮ್ಮ‌ ಮನವಿಯನ್ನ ಮುಂದೂಡಲಾಗಿದೆ.ಆದರೆ ಅದೇ ಗೋವಾ ಪವರ್ ಲೈನ್‌ಗೆ ಅನುಮತಿ ನೀಡಿದೆ.ಗೋವಾ ತಮ್ನಾರ್ ನಡುವಿನ ಮಾರ್ಗಕ್ಕೆ ಅನುಮತಿ ನೀಡಿದೆ.ಇತ್ತೀಚೆಗೆ ವನ್ಯಜೀವಿ ಮಂಡಳಿ ಸಭೆಯಲ್ಲಿ ನೀಡಿದೆ.

ಇದು ಕೇಂದ್ರ ಸರ್ಕಾರದ ಇಬ್ಬಂದಿ ನಿಲುವು ತೋರುತ್ತದೆ.ಅವರಿಗೆ ಅನುಮತಿ ನೀಡಿದ್ದು ಯಾಕೆ..?ಅತ್ಯಮೂಲ್ಯ ಕುಡಿಯುವ ನೀರಿನ ಯೋಜನೆಗೆ ಯಾಕಿಲ್ಲ. ಮಹದಾಯಿ ಯೋಜನೆ ನಾಲ್ಕು ಜಿಲ್ಲೆಗೆ ವರದಾನವಾಗಲಿದೆ.ಹಾಗಾಗಿ ಯೋಜನೆಗೆ ಅನುಮತಿ ಕೊಡಿಸಿ ಎಂದು ಪ್ರಧಾನಿಗೆ ಪತ್ರದ ಮೂಲಕ ಸಿಎಂ ಮನವಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

19/09/2024 12:48 pm

Cinque Terre

132.08 K

Cinque Terre

5

ಸಂಬಂಧಿತ ಸುದ್ದಿ