ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆನ್ನೆಗೆ ಹೊಡೆಯಲು 15 ಟೇಕ್‌ ಪಡೆದುಕೊಂಡ ಕರೀನಾ, ಯಾಕೆ ಹೀಗೆ?

ಇತ್ತೀಚೆಗೆ ಬಿಡುಗಡೆಗೊಂಡ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರದಲ್ಲಿ ರಣವೀರ್ ಬ್ರಾರ್ ಕರೀನಾ ಕಪೂರ್‌ ಜೊತೆ ನಟಿಸಿದ್ದು, ರಣವೀರ್‌ ನಟನೆ ಎಲ್ಲರ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಿನಿಮಾದ ಕ್ಲೈ ಮ್ಯಾಕ್ಸ್‌ ನಲ್ಲಿ ಇಂಟ್ರೋಗೇಶನ್‌ ಸಮಯದಲ್ಲಿ ಕರೀನಾ 'ಸ್ಲ್ಯಾಪ್' ಮಾಡುವ ದೃಶ್ಯ ಇದ್ದು,ಈ ಒಂದು ಸೀನ್‌ ಗಾಗಿ ಬೇಬೋ 15 ಟೇಕ್‌ಗಳನ್ನು ಪಡೆದುಕೊಂಡಿದ್ದಾರಂತೆ.ಕರೀನಾ ಗೆ ನನಗೆ ಕಪಾಳ ಮೋಕ್ಷ ಮಾಡುವುದು ಇಷ್ಟ ವಿರಲಿಲ್ಲ.ಶೂಟಿಂಗ್‌ ಸಮಯದಲ್ಲಿ ಈ ಬಗ್ಗೆ ಹೇಳುತ್ತಲೇ ಇದ್ದರು( ನಹಿ ಮಾರುಂಗಿ) ನಿನಗೆ ಹೊಡೆಯೋದಿಲ್ಲವೆಂದು,ಆದರೆ ನಿರ್ದೇಶಕ ಹನ್ಸಲ್ ಮೆಹ್ತಾ ಮಾರ್ ದೋ,ಎಂದು ಪ್ರಚೋದಿಸುತ್ತಿದ್ದರು.ನನಗೆ ಹೊಡೆಯುವ ಸೀನ್‌ ನಲ್ಲಿ ಕೈ ಮೂಗಿನ ತನಕ ಬಂದು ಹೋಗುತ್ತಿತ್ತು ಆದರೆ ಒಮ್ಮೆನೂ ನನಗೆ ಟಚ್‌ ಆಗುತ್ತಿರಲಿಲ್ಲ,ಹಾಗಾಗಿ ಈ ಒಂದು ಸೀನ್‌ ಗೆ ಸುಮಾರು 15 ಟೇಕ್‌ಗಳನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ ರಣವೀರ್.ಕರೀನಾ ಜೊತೆ ನಟಿಸಲು ಪ್ರಾರಂಭದಲ್ಲಿ ಭಯ ಎನಿಸಿದ್ರೂ, ನಂತರ ಅವರ ಸಿನಿಮಾ ಉತ್ಸಾಹವು ಚಿತ್ರೀಕರಣವನ್ನು ಸರಾಗವಾಗಿ ನಡೆಸುವಂತೆ ಮಾಡಿದೆ ಎಂದು ಕರೀನಾಳನ್ನು ಹಾಡಿ ಹೊಗಳಿದ್ದಾರೆ ರಣವೀರ್.

Edited By : Somashekar
PublicNext

PublicNext

19/09/2024 07:20 pm

Cinque Terre

102.71 K

Cinque Terre

1