ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆ ಹೊಸ ಸಾಧನೆ, ಲಿವರ್ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು

ಹುಬ್ಬಳ್ಳಿ: ಹುಬ್ಬಳ್ಳಿಯ HCG ಸುಚಿರಾಯು ಆಸ್ಪತ್ರೆ ವೈದ್ಯರು ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಒಬ್ಬ ವ್ಯಕ್ತಿಯ ಜೀವ ಉಳಿಸಿದ್ದಾರೆ.

ಎಸ್,,, ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ನಿಂದ 50 ವರ್ಷದ ವ್ಯಕ್ತಿಯೊಬ್ಬ ಡಿ- ಕಂಪೆನ್ಸೇಟೆಡ್ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ. ಸಾಕಷ್ಟು ಆಸ್ಪತ್ರೆಗೆ ತೋರಿಸಿದ್ದರು ಕಡಿಮೆಯಾಗಿರಲಿಲ್ಲ. ಹುಬ್ಬಳ್ಳಿಯ HCG ಸುಚಿರಾಯು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದಾಗ ಆತನ ಲಿವರ್ ಡ್ಯಾಮೇಜ್ ಆಗಿದ್ದು ಕಂಡುಬಂದಿದೆ. ಇದನ್ನು ಗಮನಿಸಿದ ಡಾ. ಬಸಂತ್ ಮಹದೇವಪ್ಪ, ಡಾ.‌ಸಂದೀಪ ಕುಂಬಾರ ಅವರು ಆತನಿಗೆ ಹೊಸ ಲಿವರ್ ಅಳವಡಿಸಲು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಸದ್ಯ ಮೊಟ್ಟ ಮೊದಲ ಬಾರಿಗೆ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಕಾಯಿಲೆ ಹೇಗೆ ಬರುತ್ತದೆ ಮತ್ತು ಯಾವ ರೀತಿ ಚಿಕಿತ್ಸೆ ನೀಡಿದ್ದಾರೆ ಎಂಬುದನ್ನು ವೈದ್ಯರೇ ಹೇಳಿದ್ದಾರೆ ಕೇಳಿ.

ಇನ್ನು ಸುಮಾರು ನಾಲ್ಕೈದು ವರ್ಷಗಳಿಂದ ಈ ವ್ಯಕ್ತಿ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ. ಈತ ಮದ್ಯಪಾನ ಮತ್ತು ಯಾವುದೇ ದುಶ್ಚಟ ಮಾಡದಿದ್ದರೂ ಈ ಕಾಯಿಲೆ ಬಂದಿದೆಯಂತೆ. ಇನ್ನೂ ಜೀವಕ್ಕೆ ತೊಂದರೆಯಾಗುತ್ತದೆಂದು ತಿಳಿದು ಹುಬ್ಬಳ್ಳಿಯ HCG ಸುಚಿರಾಯು ಆಸ್ಪತ್ರೆಗೆ ದಾಖಲಾಗಿದ್ದಾನೆ. ವೈದ್ಯರು ಸುಮಾರು 12 ಗಂಟೆಗಳ ಕಾಲ ಕಸಿ ಶಸ್ತ್ರ ಚಿಕಿತ್ಸೆ ಮಾಡಿ ಆತನ ಜೀವ ಬದುಕಿಸಿದ್ದಾರೆ. ಈ ರೋಗಿ ಏನು ಹೇಳುತ್ತಾರೆ ಕೇಳಿ.

ಒಟ್ಟಾರೆ ಹೇಳುವುದಾದರೆ ಹುಬ್ಬಳ್ಳಿಯ HCG ಸುಚಿರಾಯು ಆಸ್ಪತ್ರೆಯ ವೈದ್ಯರು ಇಂತಹ ಮಹತ್ತರ ಸಾಧನೆ ಮಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೀವ ಉಳಿಸಿಕೊಂಡ ರೋಗಿಯ ಸಂಬಂಧಿಕರು ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 04:36 pm

Cinque Terre

38.72 K

Cinque Terre

10

ಸಂಬಂಧಿತ ಸುದ್ದಿ