ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖರೀದಿ ಕೇಂದ್ರ ಆರಂಭಗೊಂಡರೂ ಖರೀದಿ ಪ್ರಕ್ರಿಯೆಯೇ ನಡೆದಿಲ್ಲ!- ಅನ್ನದಾತನ ಅಳಲು ಕೇಳುವವರಿಲ್ಲ

ಹುಬ್ಬಳ್ಳಿ: ಖರೀದಿ ಕೇಂದ್ರ ಆರಂಭಗೊಂಡರೂ ಖರೀದಿ ಪ್ರಕ್ರಿಯೆಯೇ ನಡೆದಿಲ್ಲ!- ಅನ್ನದಾತನ ಅಳಲು ಕೇಳುವವರಿಲ್ಲ

ಹುಬ್ಬಳ್ಳಿ: ಅನ್ನದಾತನ ಬದುಕು ಒಂದಿಲ್ಲೊಂದು ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದೆ. ಬಿತ್ತುವಾಗ ಬೀಜ, ಗೊಬ್ಬರ, ಮಳೆಯ ಸಮಸ್ಯೆ. ಬಿತ್ತಿದ ಬೆಳೆ ಕೈಗೆ ಬಂದಾಗ ಮಾರಾಟದ್ದೇ ದೊಡ್ಡ ಸವಾಲಾಗಿದೆ. ಧಾರವಾಡ, ಗದಗ ಜಿಲ್ಲೆ ಸೇರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರುಕಾಳು ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಸೂಚನೆ ನೀಡಿ, ಒಂದು ತಿಂಗಳು ಕಳೆಯುತ್ತ ಬಂದರೂ ಪ್ರಕ್ರಿಯೆ ಶುರುವಾಗದೇ ಬೆಳೆಗಾರರು ನೂರೆಂಟು ತೊಂದರೆ ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮುಂದಾಗಿ ಅಗತ್ಯ ಸಹಕಾರ ನೀಡಿದೆ. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಕಳೆದ ತಿಂಗಳು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಅದರಂತೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೂ ನೋಂದಣಿ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಕಾಳು ಖರೀದಿ ಮಾಡುತ್ತಿಲ್ಲ. ಇದರಿಂದ ರೈತರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮುಂದೆ ರೈತರು ತಮ್ಮ‌ಅಳಲನ್ನು ತೋಡಿಕೊಂಡಿದ್ದಾರೆ.

ಬೈಟ್: ಶಿವಣ್ಣ ಹುಬ್ಬಳ್ಳಿ, ರೈತ ಮುಖಂಡರು

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಮೊರಬ, ಆರೇಕುರಹಟ್ಟಿ, ಬ್ಯಾಹಟ್ಟಿ, ನೂಲ್ವಿ ಸೇರಿ 20 ಕೇಂದ್ರಗಳಲ್ಲಿ ಈ ವರೆಗೆ 4,123 ರೈತರು ಹೆಸರುಕಾಳು ಖರೀದಿಗೆ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಖರೀದಿ ಕೇಂದ್ರಕ್ಕೆ ಹೆಸರುಕಾಳು ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಬೆಳೆಗಾರರು ಫಸಲು ಮನೆಯಲ್ಲಿ ಇಟ್ಟುಕೊಳ್ಳಲು ಆಗದೇ, ಮಾರಾಟ ಮಾಡಲೂ ಆಗದೇ ತಾಪತ್ರಯ ಎದುರಿಸುತ್ತಿದ್ದಾರೆ.

ಬೈಟ್: ಗುರು ರಾಯನಗೌಡ್ರ, ರೈತರು

ಗದಗ ಹಾಗೂ ಧಾರವಾಡ ಜಿಲ್ಲೆಯ ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ದರ ಕಡಿಮೆ ಇದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಸರುಕಾಳು ಪ್ರತಿ ಕ್ವಿಂಟಾಲ್‌ಗೆ 6,500 ರೂಪಾಯಿಗೆ ಮಾರಾಟವಾಗಿದೆ. ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್‌ಗೆ 8,682 ರೂ. ನಿಗದಿ ಮಾಡಲಾಗಿದೆ. ಸುಮಾರು 2 ಸಾವಿರ ರೂ. ವ್ಯತ್ಯಾಸ ಇದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಜರುಗಿಸಿ ಅನ್ನದಾತನ ಅಳಲನ್ನು ಆಲಿಸಬೇಕಿದೆ.

ಸ್ಲಗ್:‌ ಬೆಳೆ ಮಾರಾಟಕ್ಕೆ ಪರದಾಟ

-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2024 07:33 pm

Cinque Terre

70.84 K

Cinque Terre

1

ಸಂಬಂಧಿತ ಸುದ್ದಿ