ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉತಾರ ಕೌಂಟರ್ ಬಂದ್ ! ಪ್ರಿಂಟರ್ ರಿಪೇರಿಗೆ ಬಾರದ ಜಿಲ್ಲಾ ಸಿಬ್ಬಂದಿ

ಕುಂದಗೋಳ: ರೈತಾಪಿ ಜನರ ಕೃಷಿ ಜಮೀನಿನ ಉತಾರ ಹಾಗೂ ಎಂ.ಆರ್ ವಿತರಣೆ ಕೌಂಟರ್ ಕಳೆದ 5 ದಿನಗಳಿಂದ ಸ್ಥಗಿತಗೊಂಡ ಪರಿಣಾಮ ಜನ ಖಾಸಗಿ ಅಂಗಡಿಗೆ ಅಲೆಯುವ ಸ್ಥಿತಿ ಏರ್ಪಟ್ಟಿದೆ.

ಹೌದು ! ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಉತಾರ ಮತ್ತು ಎಂ.ಆರ್ ನೀಡುವ ಕೌಂಟರ್ ಪ್ರಿಂಟರ್ ಸರಿಯಿಲ್ಲಾ ಎಂಬ ಕಾರಣಕ್ಕೆ ಕಳೆದ 5 ದಿನಗಳಿಂದ ಉತಾರ ಮತ್ತು ಎಂ.ಆರ್. ಪೂರೈಕೆ ಬಂದ್ ಮಾಡಿದೆ.

ಈ ಪರಿಣಾಮ ಸರ್ಕಾರಿ ಶುಲ್ಕ 25 ರೂಪಾಯಿ ನೀಡಿ ತಹಶೀಲ್ದಾರ್ ಕಚೇರಿಯಲ್ಲಿ ಉತಾರ ಪಡೆಯುತ್ತಿದ್ದ ಜನ ಖಾಸಗಿ ಅಂಗಡಿಯಲ್ಲಿ ಹೆಚ್ಚಿನ ಶುಲ್ಕ ನೀಡಿ ಉತಾರ ಮತ್ತು ಎಂ.ಆರ್. ಪಡೆಯುತ್ತಿದ್ದಾರೆ.

ಇನ್ನೂ ಪ್ರೀಂಟರ್ ಸರಿಯಿಲ್ಲಾ ಎಂಬ ವಿಷಯದ ಬಗ್ಗೆ ಸ್ವತಃ ತಹಶೀಲ್ದಾರ್ ಹಾಗೂ ಇಲಾಖೆ ಸಿಬ್ಬಂದಿ ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟರೂ ತಾಂತ್ರಿಕ ಸಿಬ್ಬಂದಿ ಬಾರದೆ ಪ್ರಿಂಟರ್ ಇವತ್ತಿಗೂ ಸರಿ ಹೋಗಿಲ್ಲಾ.

ಪ್ರಸ್ತುತ ಉತಾರ ಪೂರೈಕೆ ಲೋಪದೋಷದ ಬಗ್ಗೆ ಮೇಲಾಧಿಕಾರಿಗಳು ಗಮನಿಸಿ ಕುಂದಗೋಳ ತಹಶೀಲ್ದಾರ್ ಕಚೇರಿಗೆ ತಾಂತ್ರಿಕ ಸಿಬ್ಬಂದಿ ಕಳುಹಿಸಿಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Vinayak Patil
Kshetra Samachara

Kshetra Samachara

19/09/2024 06:48 pm

Cinque Terre

19.11 K

Cinque Terre

0

ಸಂಬಂಧಿತ ಸುದ್ದಿ