ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಿಲು ಮುರಿದಿಲ್ಲ,ಕಿಟಕಿ ಒಡೆದಿಲ್ಲ ನಿಗೂಢ ಕಳ್ಳತನ : ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯ

ಹುಬ್ಬಳ್ಳಿ : ಇದು ನಿಗೂಢ ಕಳ್ಳತನ ಸ್ಪೆಷಲ್ ಸ್ಟೋರಿ‌. ಬಾಗಿಲು ಮುರಿದಿಲ್ಲ, ಕಿಟಕಿ ಒಡೆದಿಲ್ಲ. ಆದರೂ ಕೋಣೆಯಲ್ಲಿ ಇದ್ದ ನೂರಾರು ಲ್ಯಾಪ್‌ಟಾಪ್ ಮಾಯ. ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಕಣ್ಣಮುಚ್ಚಾಲೆ ಕಳ್ಳಾಟ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..

ಸಣ್ಣಪುಟ್ಟ ಕಳ್ಳತನದಲ್ಲಿಯೂ ಬಾಗಿಲು ಮುರಿದು, ಕಿಟಕಿ ಒಡೆದಿರುವ ಅದೆಷ್ಟೋ ಪ್ರಕರಣ ನೋಡಿದ್ದೇವೆ. ಆದರೇ ಟೈಟ್ ಸೆಕ್ಯುರಿಟಿ, ಸಿಸಿಟಿವಿ ಕಣ್ಗಾವಲು ಇದ್ದರೂ ಬಹುದೊಡ್ಡ ಕಳ್ಳತನ ನಡೆದಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಕಾರ್ಮಿಕ ಇಲಾಖೆಯಲ್ಲಿ ನಡೆದ ಬಹುದೊಡ್ಡ ಕಳ್ಳತನ ಇಷ್ಟುದಿನ ಮುಚ್ಚಿಟ್ಟಿದ್ದು ಯಾಕೆ..? ಎಂಬುವಂತ ಯಕ್ಷ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಟ್ಟದ ಸುತ್ತಲೂ ಟೈಟ್ ಸೆಕ್ಯುರಿಟಿ, ಸಾಲದಕ್ಕೆ‌ ಸಿಸಿಟಿವಿ ಕಣ್ಗಾವಲು. ಆದ್ರು ಕೋಣೆಯಲ್ಲಿ ಇದ್ದ 250 ಲ್ಯಾಪ್‌ಟಾಪ್ ಪೈಕಿ 101 ಲ್ಯಾಪ್‌ಟಾಪ್ ಮಾಯವಾಗಿದೆ. ಹುಬ್ಬಳ್ಳಿಯ ಕಾರ್ಮಿಕ ಇಲಾಖೆಯಲ್ಲಿ ಏನ್ ನಡಿತೀದೆ ಎಂಬುವುದೇ ಅರ್ಥವಾಗುತ್ತಿಲ್ಲ. ಕೊಠಡಿಯಲ್ಲಿ ಭದ್ರವಾಗಿದ್ದ ಲ್ಯಾಪ್‌ಟಾಪ್ ಏಕಾಏಕಿ ಮಾಯವಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುವುದು ಹೀಗೆ..

ಹುಬ್ಬಳ್ಳಿಯ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕ ಭವನದ ಕೊಠಡಿಯಲ್ಲಿ ಇಟ್ಟಿದ್ದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಇಟ್ಟಿದ್ದ 101 ಲ್ಯಾಪ್‌ಟಾಪ್‌ಗಳು ಕಳ್ಳತನವಾಗಿದ್ದು, ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲೆಂದು ಮಂಜೂರಾಗಿದ್ದ 250 ಲ್ಯಾಪ್ ಟಾಪ್‌ಗಳನ್ನು ಕಾರ್ಮಿಕ ಭವನದ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು.

ಮೇ 22ರಿಂದ ಆಗಸ್ಟ್ 30 ರೊಳಗೆ ಕೊಠಡಿಯ ಕಿಟಕಿ ತೆರೆದು ಎಚ್‌ಪಿ ಕಂಪನಿಯ 101 ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಮೊದಲು ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್‌ ಡಿಸ್ಕ್ ಹಾಗೂ ಡಿವಿಆರ್ ಕದ್ದಿದ್ದಾರಂತೆ ಕಳ್ಳರು. ಕಟ್ಟದ ಸುತ್ತಲೂ ಹಗಲು ರಾತ್ರಿ ಕಾವಲ. ಹಾಗಿದ್ದರೆ ಇದ್ದವರಲ್ಲಿ.. ಕದ್ದವರು ಯಾರು? ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆದರು, ಅಧಿಕಾರಿಗಳು ಮೌನವಾಗಿದ್ದು ಯಾಕೆ...? ಎಂಬುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಒಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತವರು ಜಿಲ್ಲೆ ಧಾರವಾಡದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಕರ್ಮಕಾಂಡ ಬೆಳಕಿಗೆ ಬಂದಿದ್ದು, ಕಳ್ಳತನ ಆಗಿದ್ದು ಕಳೆದ ತಿಂಗಳು, ಆದರೇ ದೂರು ದಾಖಲಾಗಿದ್ದು ಈ ತಿಂಗಳು, ಹೀಗಾಗಿ ಸಾಕಷ್ಟು ಅನುಮಾನ ಹುಟ್ಟು ಹಾಕಿದ ಲ್ಯಾಪಟಾಪ್ ಕಳ್ಳತನ ಪ್ರಕರಣದ ತನಿಖೆ ನಡೆಸಿ ಹಿಂದಿರುವ ಕೈಗಳಿಗೆ ಕೋಳ ತೊಡಿಸುವ ಕಾರ್ಯ ಮಾಡಬೇಕಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2024 11:55 am

Cinque Terre

77.83 K

Cinque Terre

9

ಸಂಬಂಧಿತ ಸುದ್ದಿ