ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊತ್ತಿತೋ ಹೊತ್ತಿತು ಕನ್ನಡದ ಕಿಚ್ಚು, ಮಹದಾಯಿ ಹೋರಾಟ ಮತ್ತೆ ಮುನ್ನೆಲೆಗೆ..!

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಇಂದು ನಿನ್ನೆಯದಲ್ಲ. ನಾಲ್ಕು ದಶಕಗಳಿಂದ ಅದೆಷ್ಟೋ ಹೋರಾಟಗಳು ನಡೆದಿವೆ. ಹೀಗಿದ್ದರೂ ಆಳುವ ಸರ್ಕಾರಗಳು ಮಾತ್ರ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳನ್ನು ಇನ್ನಷ್ಟು ಜೀವಂತವಾಗಿಸಿವೆ. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಮತ್ತೆ ಹೋರಾಟದ ಕಿಚ್ಚನ್ನು ಹೊತ್ತಿಸಿವೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ರಾಜ್ಯ ಸಮಿತಿ ಹಾಗೂ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಳಸಾ ಬಂಡೂರಿ ಮಹದಾಯಿ ನಾಲೆಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಪಾದಯಾತ್ರೆ ಮೂಲಕ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಹೌದು.. ನರಗುಂದದಿಂದ ಗದಗವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು, ಹುಬ್ಬಳ್ಳಿಯ ಹೃದಯ ಭಾಗ ಚೆನ್ನಮ್ಮ ವೃತ್ತದಿಂದ ಚಾಲನೆ ನೀಡಲಾಗಿದೆ. ಹೋರಾಟಕ್ಕೆ ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಜೀವ ಜಲಕ್ಕೆ ಅನ್ನದಾತನ ಅಭ್ಯುದಯಕ್ಕೆ ಹೋರಾಟ ಎಂಬುವ ಘೋಷ ವಾಕ್ಯದಲ್ಲಿ ಮಹದಾಯಿ ಹೋರಾಟದ ಕಿಚ್ಚನ್ನು ಹೊತ್ತಿಸಿದ್ದಾರೆ.

ಇನ್ನೂ ನರಗುಂದದಿಂದ ಎರಡು ದಿನಗಳ ಪಾದಯಾತ್ರೆ ಆರಂಭಿಸಿ ರಾಜ್ಯದ ವಿವಿಧ ಗ್ರಾಮಗಳಲ್ಲಿ ಹೋರಾಟದ ಜಾಗೃತಿ ಮೂಡಿಸಲು ಮುಂದಾಗಿದೆ. ಮಹದಾಯಿ ಹಾಗೂ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆಗೆ ಧ್ವನಿಯಾಗಬೇಕಿದೆ.

ಮಲ್ಲೇಶ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2024 12:41 pm

Cinque Terre

22.55 K

Cinque Terre

1

ಸಂಬಂಧಿತ ಸುದ್ದಿ