ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

TOP 10 ನ್ಯೂಸ್ ಆಫ್ ಧಾರವಾಡ ಜಿಲ್ಲೆ: 24-Mar-2022

1.

ಧಾರವಾಡದಲ್ಲಿ ಸಾಹಿತ್ಯ ಜಾತ್ರೆ

ಕೊರೊನಾರ್ಭಟದಿಂದಾಗಿ ಕಳೆದ ಕೆಲ ವರ್ಷಗಳಿಂದ ಕಳೆಗುಂದಿದ್ದ ಸಾಹಿತ್ಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಧಾರವಾಡದಲ್ಲಿ ಮಾ.26 ಮತ್ತು 27 ರಂದು 14ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಡಾ.ರಮಾಕಾಂತ ಜೋಶಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

https://publicnext.com/article/nid/Hubballi-Dharwad/Cultural-Activity/node=624813

2.

ಶಲವಡಿಯ ಕಾಮಣ್ಣನ ಬಣ್ಣ ಕಳೆಗುಂದಿಲ್ಲ

ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ಕಾಮದಹನವಾದ ಬಳಿಕ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸುಮಾರು ಎರಡನೂರು ವರ್ಷಗಳ ಇತಿಹಾಸ ಹೊಂದಿರುವ ಶಲವಡಿ ಕಾಮಣ್ಣನ ವಿಸರ್ಜನೆ ಮಾ.27 ರಂದು ನಡೆಯಲಿದೆ.

https://publicnext.com/article/nid/Hubballi-Dharwad/Cultural-Activity/Religion/node=624807

3.

ಹುಬ್ಬಳ್ಳಿಯಲ್ಲಿ ಎಮ್ಮೆಗೆ ಗುದ್ದಿದ ಚಿಗರಿ

ಅವಳಿನಗರದಲ್ಲಿ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಎಮ್ಮೆಗೆ ಗುದ್ದಿದೆ. ಇದರಿಂದ ಆಕ್ರೋಶಗೊಂಡ ಎಮ್ಮೆ ಮಾಲೀಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

https://publicnext.com/article/nid/Hubballi-Dharwad/Accident/node=624735

4.

ಹುಬ್ಬಳ್ಳಿಯಲ್ಲಿ ಜೇಮ್ಸ್ ತೆರುವಿಗೆ ಅಭಿಮಾನಿಗಳ ಆಕ್ರೋಶ

ಹುಬ್ಬಳ್ಳಿಯಲ್ಲಿಯೂ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ರಾಜಕುಮಾರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. RRR ಚಿತ್ರಕ್ಕಾಗಿ ಸುಧಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಎತ್ತಗಂಡಿ ಮಾಡುತ್ತಿರುವ ವಿಷಯ ತಿಳಿದ ಅಪ್ಪು ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

https://publicnext.com/article/nid/Hubballi-Dharwad/Cinema/node=624725

5.

ಹಳ್ಳಿ ಹಳಿಗೆ ಕಾಂಗ್ರೆಸ್ ಜೋಡೆತ್ತು ಭೇಟಿ

ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿಗಾಗಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹಳ್ಳಿಗಳಿಗೆ ಕಾಂಗ್ರೆಸ್ ಜೋಡೆತ್ತು ಎಂದು ಕರೆಯುವ ವಿನೋದ್ ಅಸೂಟಿ ಹಾಗೂ ಎನ್ಎಚ್ ಕೋನರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡರು ಭೇಟಿ ಕೊಟ್ಟು ಮನವಿ ಮಾಡಿದರು.

https://publicnext.com/article/nid/Hubballi-Dharwad/Politics/node=624719

6.

ಲವ್ ಜಿಹಾದ್ ಖಂಡಿಸಿ ಪ್ರೊಟೆಸ್ಟ್

ಗದಗ ಲವ್ ಜಿಹಾದ್ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಪೂರ್ವ ಪುರಾಣಿಕ್ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಸ್ತೆ ತಡೆ ಮಾಡಿ ನಂತರ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಲಾಯಿತು.

https://publicnext.com/article/nid/Hubballi-Dharwad/Public-News/node=624706

7.

ಕರೆಂಟ್ ಶಾಕ್ ಹೊಡಿತೈತಿ ಹುಷಾರಾಗಿರಿ

ಹುಬ್ಬಳ್ಳಿಯ ಕೇಶ್ವಾಪೂರದ ಕುಸುಗಲ್ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೇ ಎಚ್ಚರ ಇಲ್ಲವಾದರೆ ಕರೆಂಟ್ ಶಾಕ್ ಹೊಡೆಯತ್ತೆ. ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ನಿಷ್ಕಾಳಜಿ ಎಲ್ಲೇಂದರಲ್ಲಿ ವಿದ್ಯುತ್ ಕೇಬಲ್, ಕಟ್ ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಅವ್ಯವಸ್ಥೆ ಕಂಡ ಜನ ಆಕ್ರೋಶಗೊಂಡಿದ್ದಾರೆ.

https://publicnext.com/article/nid/Hubballi-Dharwad/Infrastructure/node=624705

8.

ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ

ಮಹಾನಗರ ಪಾಲಿಕೆ ಚುನಾವಣೆಯಾಗಿ ಆರು ತಿಂಗಳು ಕಳೆದರೂ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಿಲ್ಲ.ಕಾಂಗ್ರೆಸ್ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಭಜನೆ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ. ಬಿಜೆಪಿ ದುರಾಡಳಿತಕ್ಕೆ ಇದುವರೆಗೂ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಆಗಿಲ್ಲವೆಂದು ಆಕ್ರೋಶ.

https://publicnext.com/article/nid/Hubballi-Dharwad/Politics/Government/node=624682

9.

ಭೀಕರ ಅಪಘಾತ ಇಬ್ಬರ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ-ಗರಗ ರಸ್ತೆಯಲ್ಲಿನ ಮುಮ್ಮಿಗಟ್ಟಿ ಬಳಿ ಸಂಭವಿಸಿದೆ. ಕಾರು ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲು.

https://publicnext.com/article/nid/Hubballi-Dharwad/Accident/node=624507

10.

ನೇಮಕಾತಿ ಅಕ್ರಮ ಖಂಡಿಸಿ ಪ್ರತಿಭಟನೆ

2021ರಲ್ಲಿ ನಡೆಸಲಾದ 545 ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಿಎಸ್ ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟನೆಗೆ ಸಾಥ್ ಕೊಟ್ಟರು. ಈ ಅಕ್ರಮ ಹಾಗೂ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.

https://publicnext.com/article/nid/Hubballi-Dharwad/Education/Government/node=624485

Edited By : Nagesh Gaonkar
Kshetra Samachara

Kshetra Samachara

24/03/2022 09:58 pm

Cinque Terre

17.64 K

Cinque Terre

0

ಸಂಬಂಧಿತ ಸುದ್ದಿ