ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನಾಹುತ ಆಗುವ ಮುಂಚೆ ಎಚ್ಚರ ಆಗ್ರಿ; ಇಲ್ಲ ಅಂದ್ರೆ ಕರೆಂಟ್ ಶಾಕ್ ಹೊಡಿತೈತಿ !

ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ‌..‌! ವಾಹನ ಸವಾರರೇ ಎಚ್ಚರ...! ಹುಬ್ಬಳ್ಳಿಯ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಕೇಶ್ವಾಪೂರದ ಕುಸುಗಲ್ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೇ ಎಚ್ಚರ...! ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ.

ಯಾರೋ ಮಾಡುವ ತಪ್ಪಿಗೆ ಯಾರೋ ಕಷ್ಟ ಅನುಭವಿಸಬೇಕಾದ ಸ್ಥಿತಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆಯವರ ನಿಷ್ಕಾಳಜಿಗೆ ಸಾರ್ವಜನಿಕರು ಅಪಘಾತಕ್ಕೆ ತುತ್ತಾಗುವಂತಾಗಿದೆ. ಎಲ್ಲೆಂದರಲ್ಲಿ ಹರಿದು ಬಿದ್ದಿರುವ ವಿದ್ಯುತ್ ಕೇಬಲ್, ಕಟ್ ಮಾಡಿ ಹಾಗೆಯೇ ಬಿಟ್ಟಿರುವ ವಿದ್ಯುತ್ ಪ್ರವಹಿಸುವ ಕೇಬಲ್. ಹೀಗೆ ಈ ಎಲ್ಲ ಅವ್ಯವಸ್ಥೆಗೆ ಸಾಕ್ಷಿಯಾಗಿರುವುದು ಕೇಶ್ವಾಪೂರದ ಕುಸುಗಲ್ ರಸ್ತೆ. ಬೀದಿ ದ್ವೀಪಗಳಿಗಾಗಿ ಹಾಕಿರುವ ಕೇಬಲ್ ಕೆನಕ್ಷನ್ ಸುಮಾರು ದಿನಗಳಿಂದ ಹರಿದು ಬಿದ್ದಿವೆ. ಅಲ್ಲದೇ ಹೆಸ್ಕಾಂ ಹಾಗೂ ಪಾಲಿಕೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ನಿರ್ವಹಣೆ ಮಾಡಿರುವುದು ಯಾವುದೇ ಸಮಯದಲ್ಲಿ ಆದ್ರೂ ದೊಡ್ಡ ಅಪಘಾತ ಸಂಭವಿಸಿದರೇ ಅಚ್ಚರಿ ಪಡಬೇಕಾಗಿಲ್ಲ. ಇಂತಹ ಅವ್ಯವಸ್ಥೆಯಿಂದ ಇಲ್ಲಿನ ಜನರು ಭಯದಲ್ಲಿಯೇ ಓಡಾಡುವಂತಾಗಿದೆ.

ಬೈಟ್: ಪ್ರಶಾಂತ ನಾಯಕ್(ಸಾರ್ವಜನಿಕರು)

ಅದೆಷ್ಟೋ ಬಾರಿಗೆ ಮನವಿ ಮಾಡಿದರು ಹೆಸ್ಕಾಂ ಹಾಗೂ ಪಾಲಿಕೆ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಮಕ್ಕಳು ಹಾಗೂ ವೃದ್ಧರು ರೋಡ್ ಕ್ರಾಸ್ ಮಾಡಲು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕಿದೆ. ಇನ್ನಾದರೂ ಹೆಸ್ಕಾಂ ಅಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

24/03/2022 03:29 pm

Cinque Terre

21.89 K

Cinque Terre

4

ಸಂಬಂಧಿತ ಸುದ್ದಿ