ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಐ ನೇಮಕಾತಿಯಲ್ಲಿ ಭಾರೀ ಅಕ್ರಮ: ಧಾರವಾಡದಲ್ಲಿ ಬೃಹತ್ ಪ್ರತಿಭಟನೆ

ಧಾರವಾಡ: 2021ರಲ್ಲಿ ನಡೆಸಲಾದ 545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಆಮ್ ಆದ್ಮಿ ಪಕ್ಷದ ಸದಸ್ಯರು ಕೂಡ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ಆರಂಭಿಸಿದರು.

ಪರೀಕ್ಷೆ ಶುರುವಾಗುವ ಮುಂಚೆ ಪರೀಕ್ಷಾ ಕೇಂದ್ರಗಳ ಸಂಬಂಧಪಟ್ಟ ಉಸ್ತುವಾರಿಗಳ ಜೊತೆಗೆ ಅಕ್ರಮ ಮಾಡುವ ತಂಡ ಹೊಂದಾಣಿಕೆ ಮಾಡಿಕೊಂಡು ಪ್ರಶ್ನೆ ಪತ್ರಿಕೆ ಪಡೆದುಕೊಳ್ಳುತ್ತಾರೆ. ಅಕ್ರಮ ಮಾಡುವ ತಂಡ ಪರೀಕ್ಷಾ ಕೇಂದ್ರದ ಸಮೀಪ ಝರಾಕ್ಸ್ ಮಾಡುವ ಅಂಗಡಿ, ಮುಂಗಟ್ಟುಗಳನ್ನು ಬಳಸಿ ಪ್ರಶ್ನೆ ಪತ್ರಿಕೆ ಪ್ರತಿ ತೆಗೆದುಕೊಂಡು ಉತ್ತರ ತಯಾರಿ ಮಾಡಿಕೊಳ್ಳುತ್ತಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಫ್ಜಲಪುರದ 42 ಅಭ್ಯರ್ಥಿಗಳ ಕ್ರಮಾಂಕ ಒಂದೇ ಕೊಠಡಿಯಲ್ಲಿರುವುದು ಇದಕ್ಕೆ ಪುರಾವೆಯಾಗಿದೆ. ಬ್ಲೂಟೂತ್ ಉಪಕರಣಗಳ ಮೂಲಕ ಅಕ್ರಮ ಮಾಡುವ ತಂಡ ಮೊದಲೇ ಸಿಕ್ಕ ಪ್ರಶ್ನೆ ಪತ್ರಿಕೆಯ ಉತ್ತರವನ್ನು ಉಪಕರಣದ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ. 545 ಜನ ಪಿಎಸ್‌ಐ ಹುದ್ದೆಯಲ್ಲಿ 43 ಜನ ಅಫ್ಜಲ್‌ಪುರದವರೇ ನೇಮಕಾತಿ ಹೊಂದಿದ್ದು, ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಅಕ್ರಮ ಹಾಗೂ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಿ ನಿಜವಾದ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳು ನೇಮಕಾತಿ ಹೊಂದಲು ಅವಕಾಶ ಮಾಡಿಕೊಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.

Edited By :
Kshetra Samachara

Kshetra Samachara

24/03/2022 08:45 am

Cinque Terre

33.4 K

Cinque Terre

1

ಸಂಬಂಧಿತ ಸುದ್ದಿ