ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರ ಜನರಿಗೆ ತ್ವರಿತ ಸಾರಿಗೆ ವ್ಯವಸ್ಥೆ ಒದಗಿಸಲು ಬಂದಿರುವ ಬಿ.ಆರ್.ಟಿ.ಎಸ್ ಯೋಜನೆ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಹುಟ್ಟು ಹಾಕುತ್ತಲೇ ಇದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿಯಾಗಿವೆ.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಬಿ.ಆರ್.ಟಿ.ಎಸ್ ಚಿಗರಿ ಬಸ್ ವೊಂದು ಎಮ್ಮೆಗೆ ಗುದ್ದಿರುವ ಪರಿಣಾಮ ಎಮ್ಮೆಯ ಕೊಂಬು ಮುರಿದು ಅಪಾರ ಪ್ರಮಾಣದ ರಕ್ತಸ್ರಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಮ್ಮೆ ಮಾಲೀಕರು ರಸ್ತೆಯಲ್ಲಿ ಎಮ್ಮೆಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು.
ಇನ್ನೂ ಚಿಗರಿ ಬಸ್ ಚಾಲಕರು ಸಾಕಷ್ಟು ವೇಗವಾಗಿ ಬಸ್ ಚಾಲನೆ ಮಾಡುತ್ತಾರೆ. ಶಾಲಾ ವಲಯ ಹಾಗೂ ಸಾರ್ವಜನಿಕರು ಸಾಕಷ್ಟು ಪ್ರಮಾಣದಲ್ಲಿ ಓಡಾಡುತ್ತಿರುವ ಸ್ಥಳದಲ್ಲಿಯೇ ಎಮ್ಮೆಗೆ ಗಾಯಗೊಳಿಸಿದ್ದು, ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.
Kshetra Samachara
24/03/2022 04:15 pm