ಅಣ್ಣಿಗೇರಿ: ಸಾಮಾನ್ಯವಾಗಿ ಕಾಮದಹನಕ್ಕೂ ಮುನ್ನವೇ ಕಾಮಣ್ಣನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ಕಾಮದಹನವಾದ ಬಳಿಕ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಷ್ಟೇ ಅಲ್ಲದೆ ಇನ್ನೂ ಅನೇಕ ವಿಶಿಷ್ಟತೆ, ಐತಿಹಾಸಿಕ ಹಿನ್ನಲೆಯನ್ನು ಶಲವಡಿ ಗ್ರಾಮದ ದೇಸಾಯಿಪೇಟೆ ಓಣಿಯ ಕಾಮಣ್ಣ ಹೊಂದಿದ್ದಾನೆ.
ಸುಮಾರು ಎರಡನೂರು ವರ್ಷಗಳ ಇತಿಹಾಸ ಹೊಂದಿರುವ ಶಲವಡಿ ಕಾಮಣ್ಣನ ಸೌಂದರ್ಯ ಇಂದಿಗೂ ಕಳೆಗುಂದಿಲ್ಲ. ರತಿಯ ಮನವ ಗೆದ್ದ ನಗೆಯ ಅಪರೂಪದ ಕಾಮಣ್ಣನ ಮೂರ್ತಿಯನ್ನು ಶಲವಡಿಯಲ್ಲಿ ಕಾಣಬಹುದು.
ಒಂಬತ್ತು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ ಪ್ರತಿದಿನವೂ ಜಾನಪದ, ಹೋಳಿಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಶಲವಡಿ ಕಾಮಣ್ಣನ ವಿಸರ್ಜನೆ ಕಾರ್ಯಕ್ರಮವು ಮಾರ್ಚ್ 27ರಂದು (ಭಾನುವಾರ) ವಿಸರ್ಜನೆಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ ಎಂದು ಶಲವಡಿ ಗ್ರಾಮದ ದೇಸಾಯಿಪೇಟೆ ಹಿರಿಯರು ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.
-ವಿಜಯಕುಮಾರ್ ಗಾಣಿಗೇರ, ನ್ಯೂಸ್ ಡೆಸ್ಕ್ ಪಬ್ಲಿಕ್ ನೆಕ್ಸ್ಟ್
Kshetra Samachara
24/03/2022 05:49 pm