ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ರಾಜಕುಮಾರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು.

ನಗರದ ಅಪ್ಸರಾ ಮತ್ತು ಸುಧಾ ಥಿಯೇಟರ್‌ ಸೇರಿದಂತೆ ವಿವಿಧ ಮಾಲ್ ಗಳಲ್ಲಿನ ಮಲ್ಟಿಪ್ಲೆಕ್ಸ್ ನಲ್ಲಿ ಜೇಮ್ಸ್ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದೂ RRR ಚಿತ್ರಕ್ಕಾಗಿ ಸುಧಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಎತ್ತಗಂಡಿ ಮಾಡಲಾಗುತ್ತಿದೆ.

ಈ ವಿಷಯ ಕೇಳಿದ ಅಪ್ಪು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ‌. ಯಾವುದೇ ಕಾರಣಕ್ಕೂ ಚಿತ್ರವನ್ನು ತೆಗೆಯಲು ಬಿಡುವುದಿಲ್ಲ. ಒಂದು ವೇಳೆ ಚಿತ್ರವನ್ನು ಚಿತ್ರಮಂದಿರದಿಂದ ತೆಗೆದು ಅನ್ಯ ಭಾಷೆಯ ಚಿತ್ರ ಹಾಕಿದರೆ, ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

24/03/2022 04:06 pm

Cinque Terre

15.76 K

Cinque Terre

2

ಸಂಬಂಧಿತ ಸುದ್ದಿ