ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ Daily Roundup (10.03.2022)

1. ನೇಣು ಬೀಗಿದುಕೊಂಡ ಯುವತಿ

ಧಾರವಾಡದ ಅಶ್ವಿನಿ ಪಿಜಿಯಲ್ಲಿ ನೇಣು ಬೀಗಿದುಕೊಂಡು ಗೀತಾ ಹೆಗ್ಗಣ್ಣವರ ಎಂಬ ಯುವತಿ ಸಾವು. ಬನಹಟ್ಟಿಯಿಂದ ಧಾರವಾಡಕ್ಕೆ ಬಂದು ಕೆಎಎಸ್ ಕೋಚಿಂಗ್ ಪಡೆಯುತ್ತಿದ್ದಾಕೆಗೆ ದಿನನಿತ್ಯ ಕಿರುಕುಳ ಡೆತ್ ನೋಟ್ ನಲ್ಲಿ ವಿಚಾರ ವೈರಲ್

ಮುಂದುವರೆದ ತನಿಖೆ.

https://publicnext.com/article/nid/Hubballi-Dharwad/Accident/node=614101

2. ಧಾರವಾಡದಲ್ಲಿ ಬಿಜೆಪಿ ಸಂಭ್ರಮಾಚರಣೆ

ಪಂಚರಾಜ್ಯಗಳ ಚುನಾವಣೆ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ.

https://publicnext.com/article/nid/Hubballi-Dharwad/Politics/node=614126

3. ಕಿಮ್ಸ್‌ನಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ

ಹುಬ್ಬಳ್ಳಿ: ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನದ ಅಡಿಯಲ್ಲಿ, ನಗರದ ಕಿಮ್ಸ್ ಆಸ್ಪತ್ರೆಯ ಗರ್ಭಿಣಿ ಮತ್ತು ಹೆರಿಗೆ ವಿಭಾಗದಲ್ಲಿ 50 ಜನಕ್ಕೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಆರೋಗ್ಯ ಸಿಬ್ಬಂದಿ ಉಡಿ ತುಂಬಿ ಸತ್ಕರಿಸಿದ್ದಾರೆ.

https://publicnext.com/article/nid/Hubballi-Dharwad/News/node=613640

4. ಉಸಿರುಗಟ್ಟುವಂತಹ ಸಂಭ್ರಮಾಚರಣೆ

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿಯ ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸಿ ಎರಡಟ್ಟು. ಕಲುಷಿತ ಗಾಳಿ ಸೇವಿಸಿ ಉಸಿರಾಟದ ತೊಂದರೆ ಅನುಭವಿಸಿದ ಕಾರ್ಯಕರ್ತರು.

https://publicnext.com/article/nid/Hubballi-Dharwad/Politics/Nature/node=614063

5. ಹುಬ್ಬಳ್ಳಿಯಲ್ಲಿ ವಿಷಕಾರಿ ಗಾಳಿ

ಹುಬ್ಬಳ್ಳಿಯಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿರುವ ಮಹಾನಗರ ಪಾಲಿಕೆಯ ಕಸದ ಡಂಪಿಂಗ್ ಯಾರ್ಡ್. ಆಕಾಶದೆತ್ತರಕ್ಕೆ ಹರಡಿರುವ ವಿಷಕಾರಿ ಕಾರ್ಬನ್. ವಾತಾವರಣದಲ್ಲಿ ಹರಡುವ ವಿಷಗಾಳಿ ಸೇವನೆಯಿಂದ ನರಕಯಾತನೆ.

https://publicnext.com/article/nid/Hubballi-Dharwad/Infrastructure/Government/node=614050

6. ಎಎಪಿ ಸಂಭ್ರಮಾಚರಣೆ

ಪಂಜಾಬ್‌ನಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಲು ಉತ್ಸುಕವಾಗಿದೆ. ಇನ್ನು ಫಲಿತಾಂಶ ಹೊರಬೀಳುತ್ತಿದ್ದಂತೆ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಎಎಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಪಕ್ಷದ ಧ್ವಜ ಹಿಡಿದು ಎರಡು ಸ್ಟೆಪ್ ಹಾಕಿದ ಕಾರ್ಯಕರು ಸಂಭ್ರಮಿಸಿದ್ದಾರೆ.

https://publicnext.com/article/nid/Hubballi-Dharwad/Politics/node=614012

7. ದೇಶಪಾಂಡೆ ಫೌಂಡೇಶನ್‌ನಿಂದ ʼಉದ್ಯಮಿ ಮೆಗಾ ಉತ್ಸವʼ

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ವತಿಯಿಂದ ಸಣ್ಣ ಉದ್ದಿಮೆದಾರರಿಗೆ ʼಉದ್ಯಮಿ ಮೆಗಾ ಉತ್ಸವʼ ಅಭಿವೃದ್ಧಿ ಕಾರ್ಯಕ್ರಮವನ್ನು ಮಾ. 11ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ. ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಡೆಪ್ಯೂಟಿ ಮ್ಯಾನೇಜರ್ ರಾಜೇಶ್ವರಿ ಲದ್ದಿ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

https://publicnext.com/article/nid/Hubballi-Dharwad/Cultural-Activity/node=614030

8. ಸಿದ್ದಾರೂಢರ ಹುಂಡಿಯಲ್ಲಿ 39 ಲಕ್ಷ 24 ಸಾವಿರ ಸಂಗ್ರಹ

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಫೆ 16 ರಿಂದ ಮಾ 9 ರವರೆಗೆ ಸುಮಾರು 39 ಲಕ್ಷ 24 ಸಾವಿರ ರೂಪಾಯಿ. ಹಾಗೂ 64 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ. ಸಿಬ್ಬಂದಿ ಹಾಗೂ ಭಕ್ತರ ಎದುರು ಹುಂಡಿ ತೆರೆದು ಎಣಿಕೆ ಮಾಡಲಾಗಿದೆ.

https://publicnext.com/article/nid/Hubballi-Dharwad/Religion/node=613964

9. ಗಾಂಧಿ ವೇಷಧಾರಿಯಿಂದ ಭ್ರೂಣ ಹತ್ಯೆ ವಿರುದ್ಧ ಜಾಗೃತಿ

ಭ್ರೂಣ ಹತ್ಯೆ ನಿಲ್ಲಿಸಲು ಗದಗ ಮೂಲದ ಮುತ್ತಣ್ಣ ತಿರ್ಲಾಪುರ ಎಂಬ ವ್ಯಕ್ತಿ ಗಾಂಧಿ ವೇಷ ತೊಟ್ಟು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇಮದು ಹುಬ್ಬಳ್ಳಿ ತಲುಪಿದ ಅವರು ಹೆಣ್ಣು ಮಕ್ಕಳ ಸಬಲೀಕರಣ ಕುರಿತು ಜಾಗೃತಿ ಮೂಡಿಸಿದ್ದಾರೆ.

https://publicnext.com/article/nid/Hubballi-Dharwad/Cultural-Activity/Human-Stories/node=614164

10. ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ

ಧಾರವಾಡದಲ್ಲಿ ಸ್ಥಾಪನೆಯಾಗಿರುವ ಉನ್ನತ ಶಿಕ್ಷಣ ಅಕಾಡೆಮಿಯು ದೇಶದ ಉತ್ಕೃಷ್ಟ ಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಉನ್ನತ ಶಿಕ್ಷಣದ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಕಲ್ಪಿಸಲು ಸದನದಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/03/2022 10:05 pm

Cinque Terre

104.86 K

Cinque Terre

1

ಸಂಬಂಧಿತ ಸುದ್ದಿ