ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ಧಾರೂಢ ಮಠದಲ್ಲಿ 39.24 ಲಕ್ಷ ರೂ.ದೇಣಿಗೆ ಸಂಗ್ರಹ

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಫೆ 16 ರಿಂದ ಮಾ 9 ರವರೆಗೆ ಸುಮಾರು 39.24 ಲಕ್ಷ ರೂ. ಹಾಗೂ 64 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ.

ಸಿದ್ಧಾರೂಢರ ಮಠದ ಕಾಣಿಕೆ ಪೆಟ್ಟಿಗೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮ್ಮುಖದಲ್ಲಿ ಸಿದ್ಧಾರೂಢ ನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಹಾಗೂ ಭಕ್ತರ ತೆರೆದು ಎಣಿಕೆ ಮಾಡಲಾಗಿದೆ.

ಒಟ್ಟು 39,24,396 ರೂ. ಹಾಗೂ 64,404 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿರುತ್ತವೆ. 20 ದಿವಸಗಳಲ್ಲಿ ಸಂಗ್ರಹವಾದ ದಾಖಲೆ ಕಾಣಿಕೆ ಇದಾಗಿದೆ.

ಎಣಿಕೆ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್‌ ಡಿ.ಮಾಳಗಿ , ವೈಸ್ ಚೇರಮನ್ ಡಾ. ಗೋವಿಂದ ಜಿ. ಮಣ್ಣೂರ , ಗೌರವ ಕಾರ್ಯದರ್ಶಿ ಜಗದೀಶ ಲ.ಮಗಜಿಕೊಂಡಿ ಸೇರಿದಂತೆ ಧರ್ಮದರ್ಶಿಗಳು , ಶಿರಸ್ತೆದಾರರು , ಶ್ರೀಮಠದ ಮ್ಯಾನೇಜರ್ ಈರಣ್ಣ ಇದ್ದರು.

Edited By :
Kshetra Samachara

Kshetra Samachara

10/03/2022 12:53 pm

Cinque Terre

7.9 K

Cinque Terre

1

ಸಂಬಂಧಿತ ಸುದ್ದಿ