ಧಾರವಾಡ: ಕೆಎಎಸ್ ಕೋಚಿಂಗ್ ಪಡೆಯುತ್ತಿದ್ದ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಅಶ್ವಿನಿ ಪಿಜಿಯಲ್ಲಿ ನಡೆದಿದೆ.
22 ವರ್ಷದ ಗೀತಾ ಹೆಗ್ಗಣ್ಣವರ ಆತ್ಮಹತ್ಯೆ ಮಾಡಿಕೊಂಡಾಕೆ. ಕೆಎಎಸ್ ಕೋಚಿಂಗ್ ಪಡೆಯಲು ಬನಹಟ್ಟಿಯಿಂದ ಧಾರವಾಡಕ್ಕೆ ಬಂದಿದ್ದ ಗೀತಾ ಧಾರವಾಡದ ಅಶ್ವಿನಿ ಪಿಜಿಯಲ್ಲಿ ಉಳಿದುಕೊಂಡಿದ್ದಳು.ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
10/03/2022 04:04 pm