ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾ.11ರಿಂದ ʼಉದ್ಯಮಿ ಮೆಗಾ ಉತ್ಸವʼ; ಕರಕುಶಲ ವಸ್ತು ಪ್ರದರ್ಶನ-ಮಾರಾಟ ವೈಭವ

ಹುಬ್ಬಳ್ಳಿ: ನಗರದ ದೇಶಪಾಂಡೆ ಫೌಂಡೇಶನ್ ವತಿಯಿಂದ ʼಉದ್ಯಮಿ ಮೆಗಾ ಉತ್ಸವʼ ಸಣ್ಣ ಉದ್ದಿಮೆದಾರರಿಗೆ ಅಭಿವೃದ್ಧಿ ಕಾರ್ಯಕ್ರಮವನ್ನು ಮಾ. 11ರಿಂದ 15ರ ವರೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಡೆಪ್ಯೂಟಿ ಮ್ಯಾನೇಜರ್ ರಾಜೇಶ್ವರಿ ಲದ್ದಿ ಹೇಳಿದರು.

ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 9ರ ವರೆಗೆ ಉತ್ಸವ ನಡೆಯಲಿದ್ದು, ಉತ್ತರ ಕರ್ನಾಟಕದ ಸಣ್ಣ ಉದ್ದಿಮೆದಾರರಿಗೆ ಮಾರುಕಟ್ಟೆ ಅವಕಾಶ ಕಲ್ಪಿಸುವ ಉತ್ಸವವಾಗಿದ್ದು, ನೂರಕ್ಕಿಂತ ಹೆಚ್ಚು ಸ್ಟಾಲ್‌ ಗಳನ್ನು ಅಳವಡಿಸಿ ವಸ್ತು ಪ್ರದರ್ಶನ- ಮಾರಾಟ ನಡೆಯಲಿದೆ.

ಅವಳಿನಗರದ ಸಣ್ಣ ಉದ್ದಿಮೆದಾರರು ಕೈಯಿಂದ ಹಾಗೂ ನೈಸರ್ಗಿಕವಾಗಿ ತಯಾರಿಸಿರುವ ಬಟ್ಟೆಗಳು, ಆಹಾರ ಪದಾರ್ಥ ಹಾಗೂ ಮನೆ ಅಥವಾ ಕಚೇರಿಯ ಅಲಂಕಾರಿಕ ವಸ್ತುಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮುಂಚೆ 10 ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ ಎಂದರು.

ಮಾ.12 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಪಂ ಸಿಇಒ ಸುರೇಶ ಇಟ್ನಾಳ್, ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್, ದೇಶಪಾಂಡೆ ಸ್ಟಾರ್ಟ್‌ ಅಪ್ಸ್ ಸಿಇಒ ಅರವಿಂದ ಚಿಂಚೋರೆ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.

ಅಂದೇ ಸ್ವಾವಲಂಬಿ ಸಖಿ ಉತ್ಪಾದಕರ ಕಂಪನಿ ನಿಯಮಿತ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಕೂಡ ನಡೆಯಲಿದೆ. ಇದರಲ್ಲಿ 250ಕ್ಕೂ ಹೆಚ್ಚು ಮಹಿಳೆಯರು, ಷೇರುದಾರರು ಭಾಗವಹಿಸಿ ಮುಂದಿನ ಕಾರ್ಯಕ್ರಮ ಕುರಿತು ಚರ್ಚಿಸಲಾಗುವುದು ಎಂದರು.

Edited By :
Kshetra Samachara

Kshetra Samachara

10/03/2022 02:33 pm

Cinque Terre

27.96 K

Cinque Terre

0

ಸಂಬಂಧಿತ ಸುದ್ದಿ