ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೌಟು ಹಿಡಿಯುವ ಕೈ ದೇಶ ಆಳಬಹುದು.. ಭ್ರೂಣ ಹತ್ಯೆ ನಿಲ್ಲಿಸಿ..

ಹುಬ್ಬಳ್ಳಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವೃದ್ಧನೊಬ್ಬ ಸಾಧಕಿಯರೇ ನಿಮಗೊಂದು ಸಲಾಂ ಎಂಬ ನಾಮಧ್ಯೇಯದೊಂದಿಗೆ, ಹುಬ್ಬಳ್ಳಿಯಲ್ಲಿ ಏಕಾಂಗಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಹೌದು ಹೀಗೆ ಕೈಯಲ್ಲಿ ಕೋಲು ಹಿಡಿದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವೇಷಧಾರಿಯಾಗಿರುವ ಈತನ ಹೆಸರು ಮುತ್ತಣ್ಣ ಚನ್ನಬಸಪ್ಪ ತಿರಲಾಪುರ. ಮೂಲತಃ ಗದಗ ನಿವಾಸಿ. ಹಲವು ವರ್ಷಗಳಿಂದ ನಿರಂತರವಾಗಿ ಮಹಿಳೆಯರ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗದಗದಿಂದ ಪಾದಯಾತ್ರೆ ಮೂಲಕ ಇಂದು ಹುಬ್ಬಳ್ಳಿಗೆ ತಲುಪಿ ‘ಬೇಟಿ ಬಚಾವೋ, ಬೇಟಿ ಪಡಾವೋ’, ಭ್ರೂಣ ಹತ್ಯೆ ನಿಲ್ಲಿಸಿ ಮಹಿಳೆಯರಿಗೆ ಗೌರವ ಕೊಡಿ, ತೊಟ್ಟಿಲು ತೂಗುವ ಕೈ, ಸೌಟು ಹಿಡಿಯುವ ಕೈ, ಜಗತ್ತನ್ನೇ ಆಳಬಲ್ಲಳು ಎಂಬ ನಾಮ ಫಲಕದೊಂದಿಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/03/2022 06:21 pm

Cinque Terre

389.02 K

Cinque Terre

8

ಸಂಬಂಧಿತ ಸುದ್ದಿ