ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಣ್ಣಿನ ಸಂರಕ್ಷಣೆ ಕುರಿತು ವಿಶೇಷ ಅಭಿಯಾನ

ಧಾರವಾಡ: ವಿಶ್ವ ಮಣ್ಣಿನ ದಿನಾಚರಣೆಯ ಅಂಗವಾಗಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಹಾಗೂ ಸರಸ್ವತಿ ಜ್ಞಾನ ಮಹಿಳಾ ಮಂಡಳ ಸಹಯೋಗದಲ್ಲಿ ‘ತ್ಯಾಜ್ಯ ಮುಕ್ತ ಮಣ್ಣು’ ವಿಷಯ ಕುರಿತ ಮಣ್ಣಿನ ಸಂರಕ್ಷಣೆಯ ಜಾಗೃತಿ ಹಾಗೂ ಪೇಪರ್ ಬ್ಯಾಗ್ ತಯಾರಿಕೆ ಕುರಿತು ಉಚಿತ ತರಬೇತಿ ಕಾರ್ಯಾಗಾರವನ್ನು ಧಾರವಾಡದ ಹೊಸ ಎಪಿಎಂಸಿಯ ಮಟ್ಟಿ ಪ್ಲಾಟ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ಸಮಿತಿಯ ಅಧ್ಯಕ್ಷೆ ಜಯಶ್ರೀ ಗೌಳಿಯವರ ಮಾತನಾಡಿ, ಬೆಳೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಕೈಗಾರಿಕೆಗಳಿಂದ ಮುಂಬರುವ ತ್ಯಾಜ್ಯ, ನಗರ ಪ್ರದೇಶಗಳಲ್ಲಿ ಸಂಗ್ರಹಣೆಯಾದ ತ್ಯಾಜ್ಯ ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದು, ಮನುಕುಲ ಸಂಕಟದಲ್ಲಿದೆ. ಅತೀ ವೇಗದಲ್ಲಿ ತ್ಯಾಜ್ಯದಿಂದ ಮಣ್ಣು ಕಲುಷಿತಗೊಳ್ಳುತ್ತಿದ್ದು, ಪ್ಲಾಸ್ಟಿಕ್‌ನಿಂದ ಮಣ್ಣನ್ನು ರಕ್ಷಿಸಬೇಕು.

ರೈತಾಪಿ ಜನರು ತಮ್ಮ ಹೊಲಗಳಲ್ಲಿ ಸಾವಯವ ಗೊಬ್ಬರಗಳನ್ನೇ ಬಳಸುವುದು ಕಡ್ಡಾಯವಾಗಬೇಕು. ಮಣ್ಣಿನಿಂದಲೇ ಬೆಳೆ, ಮಣ್ಣಿನಿಂದಲೇ ಚಿನ್ನ, ಮಣ್ಣಿನಿಂದಲೇ ಗಿಡ -ಮರ, ಮಣ್ಣು ರೈತನ ಸಂಪತ್ತು, ಮಣ್ಣಿನಿಂದಲೇ ನಮ್ಮ ಉಳಿವು ಮತ್ತು ಮಣ್ಣಿನ ರಚನೆಗೆ ಅನೇಕ ವರ್ಷಗಳೇ ಬೇಕು. ನೈಸರ್ಗಿಕ ಸಂಪತ್ತನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿಯಡಿಯಲ್ಲಿ ಪೇಪರ್ ಬ್ಯಾಗ್ ತಯಾರಿಕೆ ಕುರಿತು ಉಚಿತ ತರಬೇತಿ ನೀಡಲಾಯಿತು. ಮಹಿಳೆಯರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತ್ಯಜಿಸಿ, ಪ್ಲಾಸ್ಟಿಕ್ ಪರ್ಯಾಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸುವುದಾಗಿ ಪಣತೊಟ್ಟರು. ಪರಿಸರ ಸಮಿತಿಯಿಂದ ಸಸಿಗಳನ್ನು ವಿತರಿಸಲಾಯಿತು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/12/2024 08:35 pm

Cinque Terre

43.64 K

Cinque Terre

0

ಸಂಬಂಧಿತ ಸುದ್ದಿ